Select Your Language

Notifications

webdunia
webdunia
webdunia
webdunia

ಓಂ ಹೆಲಿಕಾಪ್ಟ್ರೇಯ ನಮಃ! ಧೋನಿಗೆ ಸೆಹ್ವಾಗ್ ಸ್ಪೆಷಲ್ ಬರ್ತ್ ಡೇ ವಿಶ್

ಧೋನಿ
ನವದೆಹಲಿ: ಇಂದು ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಗೆ ಹುಟ್ಟುಹಬ್ಬದ ಸಂಭ್ರಮ. ಈ ದಿನ ಕ್ರಿಕೆಟ್ ಸ್ನೇಹಿತರು, ಅಭಿಮಾನಿಗಳು ಧೋನಿಗೆ ಬರ್ತ್ ಡೇ ವಿಶ್ ಮಾಡುತ್ತಿದ್ದಾರೆ.

ಆದರೆ ಸಾಮಾನ್ಯವಾಗಿ ಎಲ್ಲರ ಹುಟ್ಟುಹಬ್ಬಕ್ಕೂ ವಿಶೇಷವಾಗಿ ವಿಶ್ ಮಾಡುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈಗ ಧೋನಿ ಬರ್ತ್ ಡೇಗೆ ಎಲ್ಲರೂ ಮನಸಾರೆ ನಗುವಂತೆ ವಿಶ್ ಮಾಡಿದ್ದಾರೆ.

ಧೋನಿ ಹೇಳಿ ಕೇಳಿ ಹೆಲಿಕಾಪ್ಟರ್ ಶಾಟ್ ಗೆ ಫೇಮಸ್. ಹೀಗಾಗಿ ಧೋನಿ ಜೊತೆಗಿನ ಹಳೆಯ ಫೋಟೋ ಪ್ರಕಟಿಸಿರುವ ಸೆಹ್ವಾಗ್ ‘ಒಂದು ಫುಲ್ ಸ್ಟಾಪ್ ಇರದೇ ವಾಕ್ಯ ಪೂರ್ತಿಯಾಗದು. ಹಾಗೇ ಧೋನಿ ಕ್ರೀಸ್ ನಲ್ಲಿರದೇ ಪಂದ್ಯ ಪೂರ್ತಿಯಾಗದು. ಎಲ್ಲಾ ತಂಡಗಳಿಗೂ ಧೋನಿಯಂತಹ ನಾಯಕ ಮುನ್ನಡೆಸುವ ಭಾಗ್ಯ ದೊರೆಯುವುದಿಲ್ಲ. ಹ್ಯಾಪಿ ಬರ್ತ್ ಡೇ ಮಹಿ. ಓಂ ಹೆಲಿಕಾಪ್ಟ್ರೇಯ ನಮಃ’ ಎಂದು ತಮ್ಮದೇ ಶೈಲಿಯಲ್ಲಿ ಶುಭ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಘು ಅಭ್ಯಾಸ ಆರಂಭಿಸಿದ ಕೆಎಲ್ ರಾಹುಲ್