ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಬ್ಯಾಟಿಗ ಜಾನಿ ಬೇರ್ ಸ್ಟೋ ನಡುವೆ ಮೈದಾನದಲ್ಲಿ ಮಾತಿನ ಚಕಮಕಿ ನಡೆದಿತ್ತು.
ಜಾನಿ ಬೇರ್ ಸ್ಟೋ ಬ್ಯಾಟಿಂಗ್ ಮಾಡುತ್ತಿದ್ದಾಗ ಕೊಹ್ಲಿ ಜೊತೆಗೆ ಮಾತಿನ ಚಕಮಕಿಯಾಗಿದೆ. ಈ ಸಂದರ್ಭದಲ್ಲಿ ಬಾಯ್ಮುಚ್ಚಿಕೊಂಡು ಬ್ಯಾಟಿಂಗ್ ಮಾಡು ಎಂದು ಕೊಹ್ಲಿ ಬೇರ್ ಸ್ಟೋಗೆ ಸನ್ನೆ ಮಾಡಿದ್ದರು.
ಇದಾದ ಬಳಿಕ 106 ರನ್ ಗಳಿಸಿ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿ ಬೇರ್ ಸ್ಟೋ ಕ್ಯಾಚ್ ಪಡೆದಿದ್ದರು. ಹೀಗಾಗಿ ಬೇರ್ ಸ್ಟೋ ಔಟಾಗಿ ತೆರಳುವಾಗ ಕೊಹ್ಲಿ ಪ್ಲೇಯಿಂಗ್ ಕಿಸ್ ಕೊಟ್ಟು ಸೆಂಡ್ ಆಫ್ ಮಾಡಿದ್ದಾರೆ. ಈ ವಿಡಿಯೋಗಳು ಈಗ ವೈರಲ್ ಆಗಿವೆ.