Publish Date: Sun, 03 Jul 2022 (16:55 IST)
Updated Date: Sun, 03 Jul 2022 (16:58 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ನಲ್ಲಿ ಟೀಂ ಇಂಡಿಯಾಕ್ಕೆ ಮಳೆಯೇ ಶಾಪವಾಗಿದೆ. ಇದೀಗ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದ್ದು, ಮಳೆಯೂ ಶುರುವಾಗಿದೆ.
ಇದರಿಂದಾಗಿ ಆಟ ಸ್ಥಗಿತಗೊಳಿಸಲಾಗಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 416 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಇಂಗ್ಲೆಂಡ್ ಮೇಲೆ ಭಾರತೀಯ ಬೌಲರ್ ಗಳು ಅಂಕುಶ ಹಾಕಿದ್ದರು. ಇಂದಿನ ದಿನದಾಟದಲ್ಲಿ ಇನ್ನೇನು ಟೀಂ ಇಂಡಿಯಾ ಆಟಗಾರರು ಮೇಲುಗೈ ಸಾಧಿಸುತ್ತಾರೆನ್ನುವಾಗ ಮಳೆ ಆಗಮನವಾಗಿದೆ.
ಇಂದಿನ ದಿನದಾಟದಲ್ಲಿ ಬೆನ್ ಸ್ಟೋಕ್ 25 ರನ್ ಗಳಿಸಿ ಶ‍್ರಾದ್ಧೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ 91 ರನ್ ಗಳಿಸಿರುವ ಜಾನಿ ಬೇರ್ ಸ್ಟೋ ಮತ್ತು 7 ರನ್ ಗಳಿಸಿರುವ ಸ್ಯಾಮ್ ಬಿಲ್ಲಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಮೊದಲ ಇನಿಂಗ್ಸ್ ಮುನ್ನಡೆ ದಾಟಲು ಇಂಗ್ಲೆಂಡ್ ಇನ್ನೂ 216 ರನ್ ಗಳಿಸಬೇಕಿದೆ.