Select Your Language

Notifications

webdunia
webdunia
webdunia
webdunia

ಮಳೆ ನಡುವೆ ಟೀಂ ಇಂಡಿಯಾ ಶೈನಿಂಗ್

ಮಳೆ ನಡುವೆ ಟೀಂ ಇಂಡಿಯಾ ಶೈನಿಂಗ್
ಬರ್ಮಿಂಗ್ ಹ್ಯಾಮ್ , ಶನಿವಾರ, 2 ಜುಲೈ 2022 (21:08 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಮಳೆ ನಡುವೆಯೂ ಟೀಂ ಇಂಡಿಯಾ ಬೌಲರ್ ಗಳು ಉತ್ತಮ ಪ್ರದರ್ಶನ ತೋರಿದ್ದಾರೆ.

ಮೊದಲ ಇನಿಂಗ್ಸ್ ನಲ್ಲಿ ಭಾರತ 416 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭದಲ್ಲೇ ಅಲೆಕ್ಸ್ ಲೀಸ್ (6) ವಿಕೆಟ್ ಕಳೆದುಕೊಂಡಿತು. ನಡುವೆ ನಡುವೆ ವರುಣ ರಾಯನ ಆಗಮನಾಗಿದ್ದು, ಇದೀಗ ಮಳೆಯಿಂದಾಗಿ ಕೆಲವು ಕಾಲ ಆಟ ಸ್ಥಗಿತಗೊಂಡಿದೆ.

ಚಹಾ ವಿರಾಮದ ವೇಳೆಗೆ ಇಂಗ್ಲೆಂಡ್ 60 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಈ ಮೂರೂ ವಿಕೆಟ್ ನಾಯಕ ಜಸ್ಪ್ರೀತ್ ಬುಮ್ರಾ ಪಾಲಾಗಿದೆ. ಇದೀಗ ಕ್ರೀಸ್ ನಲ್ಲಿ 19 ರನ್ ಗಳಿಸಿರುವ ಜೋ ರೂಟ್ ಮತ್ತು 6 ರನ್ ಗಳಿಸಿರುವ ಜಾನಿ ಬೇರ್ ಸ್ಟೋ ಕ್ರೀಸ್ ನಲ್ಲಿದ್ದಾರೆ. ಇದೀಗ ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇಂಗ್ಲೆಂಡ್ 356 ರನ್ ಗಳಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ನಲ್ಲಿ ಟಿ20 ಆಟ: ಜಡೇಜಾ, ಬುಮ್ರಾ ಅಬ್ಬರಕ್ಕೆ ಟೀಂ ಇಂಡಿಯಾ 400