Publish Date: Sat, 02 Jul 2022 (08:10 IST)
Updated Date: Sat, 02 Jul 2022 (08:55 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ದಿನದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿ ದಿನದಾಟ ಮುಗಿಸಿದೆ.
ಅಗ್ರ ಕ್ರಮಾಂಕದ ಬ್ಯಾಟಿಗರು ಕೈಕೊಟ್ಟ ಬಳಿಕ ಜೊತೆಯಾದ ರಿಷಬ್ ಪಂತ್-ರವೀಂದ್ರ ಜಡೇಜಾ ಜೋಡಿ ಭಾರತಕ್ಕೆ ಚೇತರಿಕೆ ನೀಡಿದರು. ಅದರಲ್ಲೂ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ರಿಷಬ್ ಪಂತ್ ಕೇವಲ 111 ಎಸೆತಗಳಿಂದ 146 ರನ್ ಗಳಿಸಿ ಔಟಾದರು.
ರವೀಂದ್ರ ಜಡೇಜಾ 83 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಇಂದು ಶತಕ ಗಳಿಸುವ ನಿರೀಕ್ಷೆಯಲ್ಲಿದ್ದಾರೆ. ಇದೀಗ ಜಡೇಜಾ ಜೊತೆಗೆ ಖಾತೆ ತೆರೆಯದೇ ಮೊಹಮ್ಮದ್ ಶಮಿ ಕ್ರೀಸ್ ನಲ್ಲಿದ್ದಾರೆ.