Publish Date: Sat, 02 Jul 2022 (09:00 IST)
Updated Date: Sat, 02 Jul 2022 (09:31 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ ರಿಷಬ್ ಪಂತ್ ತಮ್ಮ ಬೀಡುಬೀಸಿನ ಶೈಲಿಯಲ್ಲಿ ಬ್ಯಾಟ್ ಬೀಸಿ ಶತಕ ಗಳಿಸಿದಾಗ ಕೋಚ್ ರಾಹುಲ್ ದ್ರಾವಿಡ್ ಸಂಭ್ರಮಿಸಿದ ಕ್ಷಣಗಳ ಫೋಟೋ ಈಗ ವೈರಲ್ ಆಗಿದೆ.
ದ್ರಾವಿಡ್ ಸಾಮಾನ್ಯವಾಗಿ ಯಾವುದಕ್ಕೂ ಅತಿಯಾಗಿ ಸಂಭ್ರಮಿಸುವುದಿಲ್ಲ. ಆದರೆ ತಮ್ಮ ತಂಡದ ಹುಡುಗು ಬುದ್ದಿಯ ರಿಷಬ್ ಶತಕ ಗಳಿಸಿದಾಗ ಪೆವಿಲಿಯನ್ ನಲ್ಲಿ ಕುಳಿತಿದ್ದ ದ್ರಾವಿಡ್ ಕುಣಿದು ಕುಪ್ಪಳಿಸಿದ್ದಾರೆ.
ದ್ರಾವಿಡ್ ಈ ರೀತಿ ಸಂಭ್ರಮಿಸಿದ್ದಾರೆಂದರೆ ಈ ಶತಕ ಎಷ್ಟು ಅಮೂಲ್ಯವಾಗಿತ್ತು ಎಂಬುದು ಅರ್ಥವಾಗುತ್ತದೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.