Publish Date: Sun, 03 Jul 2022 (16:35 IST)
Updated Date: Sun, 03 Jul 2022 (16:37 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಉಭಯ ತಂಡದ ಆಟಗಾರರು ನೀಲಿ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದಾರೆ.
ಇದಕ್ಕೆ ಕಾರಣ ವಿಶೇಷವಾಗಿದೆ. ಈ ಕ್ಯಾಪ್ ಗಳನ್ನು ಪಂದ್ಯದ ಬಳಿಕ ಒಳ್ಳೆಯ ಉದ್ದೇಶಕ್ಕಾಗಿ ಹರಾಜಿಗಿಡಲಾಗುತ್ತದೆ. ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ನೀಲಿ ಕ್ಯಾಪ್ ಧರಿಸಿ ಆಡಲಾಗುತ್ತಿದೆ.
ಇಂಗ್ಲೆಂಡ್ ನ ದಿಗ್ಗಜ ಕ್ರಿಕೆಟಿಗ ಬಾಬ್ ವಿಲ್ಲಿಸ್ ಇದೇ ರೋಗದಿಂದ ನಿಧನರಾಗಿದ್ದರು. ಹೀಗಾಗಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಅವರ ಕುಟುಂಬದವರೇ ಅಭಿಯಾನ ನಡೆಸುತ್ತಿದ್ದಾರೆ. ಹೀಗಾಗಿ ಇದಕ್ಕೆ ದೇಣಿಗೆ ಸಂಗ್ರಹಿಸಲು ಕ್ರಿಕೆಟಿಗರೂ ಕೈ ಜೋಡಿಸಿದ್ದಾರೆ.