Publish Date: Sun, 03 Jul 2022 (08:40 IST)
Updated Date: Sun, 03 Jul 2022 (09:14 IST)
ಲಂಡನ್: ಮನೆಯಲ್ಲಿ ಹುಲಿ ಹೊರಗೆ ಇಲಿ ಎಂಬ ಮಾತಿದೆ. ಆದರೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಇದನ್ನು ಉಲ್ಟಾ ಮಾಡಿದ್ದಾರೆ.
ರಿಷಬ್ ಪಂತ್ ಸ್ವದೇಶದಲ್ಲಿ ನಡೆಯುವ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಮಿಂಚಿದ್ದು ಕಡಿಮೆ. ಆದರೆ ವಿದೇಶೀ ಪಿಚ್ ನಲ್ಲಿ ಭರ್ಜರಿ ಇನಿಂಗ್ಸ್ ಆಡುತ್ತಾರೆ.
ಇದಕ್ಕೆ ಈ ಮೊದಲು ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿ ಕೂಡಾ ಉದಾಹರಣೆ. ಸೋಲುತ್ತಿದ್ದ ಟೀಂ ಇಂಡಿಯಾಗೆ ಕಳೆದ ಬಾರಿ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗಿದ್ದು, ರಿಷಬ್ ಪಂತ್ ರ ಸ್ಪೋಟಕ ಬ್ಯಾಟಿಂಗ್ ನಿಂದ. ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಸ್ಪೋಟಕ ಬ್ಯಾಟಿಂಗ್ ನಿಂದ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸುತ್ತಾರೆ.
ಇದೀಗ ಇಂಗ್ಲೆಂಡ್ ನಲ್ಲೂ ಇದನ್ನೇ ಮಾಡಿದ್ದಾರೆ. ಈ ಮೂಲಕ ತಾವು ವಿದೇಶೀ ಪಿಚ್ ಗಳಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಎಷ್ಟು ಉಪಯುಕ್ತ ಆಟಗಾರ ಎಂದು ಮತ್ತೆ ನಿರೂಪಿಸಿದ್ದಾರೆ.