Publish Date: Sun, 03 Jul 2022 (20:15 IST)
Updated Date: Sun, 03 Jul 2022 (20:17 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಮೊದಲ ಇನಿಂಗ್ಸ್ ನಲ್ಲಿ 127 ರನ್ ಗಳ ಮಹತ್ವದ ಮುನ್ನಡೆ ಲಭಿಸಿದೆ.
ಮೊದಲ ಇನಿಂಗ್ಸ್ ನಲ್ಲಿ ಭಾರತ 416 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 284 ರನ್ ಗಳಿಗೆ ಆಲೌಟ್ ಆಗಿತ್ತು. ಜಾನಿ ಬೇರ್ ಸ್ಟೋ 106 ರನ್ ಸಿಡಿಸಿದರು. ಭಾರತದ ಪರ ಮೊಹಮ್ಮದ್ ಸಿರಾಜ್ 4, ಜಸ್ಪ್ರೀತ್ ಬುಮ್ರಾ 3, ಮೊಹಮ್ಮದ್ ಶಮಿ 2 ಶ್ರಾದ್ಧೂಲ್ ಠಾಕೂರ್ 1 ವಿಕೆಟ್ ಕಬಳಿಸಿದರು. ಜಡೇಜಾಗೆ ವಿಕೆಟ್ ಇಲ್ಲದೇ ಹೋಯ್ತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದೆ. 4 ರನ್ ಗಳಿಸಿರುವ ಶುಬ್ನಂ ಗಿಲ್ ಜೇಮ್ಸ್ ಆಂಡರ್ಸನ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ 14 ರನ್ ಗಳಿಸಿರುವ ಚೇತೇಶ್ವರ ಪೂಜಾರ ಮತ್ತು 2 ರನ್ ಗಳಿಸಿರುವ ಹನುಮ ವಿಹಾರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತಕ್ಕೆ ಒಟ್ಟಾರೆ ಮುನ್ನಡೆ 157 ರನ್ ಗೆ ತಲುಪಿದೆ.