Publish Date: Sun, 10 Jul 2022 (08:40 IST)
Updated Date: Sun, 10 Jul 2022 (09:14 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ವಿವೊ ಮೊಬೈಲ್ ತಯಾರಕ ಕಂಪನಿಯ ಬ್ರಾಂಡ್ ಅಂಬಾಸಿಡರ್.
ಆದರೆ ಈಗ ಕಂಪನಿ ಕೆಲವು ದಿನಗಳ ಮಟ್ಟಿಗೆ ಕೊಹ್ಲಿ ಕಾಣಿಸಿಕೊಳ್ಳುವ ಜಾಹೀರಾತಿಗೆ ಕತ್ತರಿ ಹಾಕಲು ತೀರ್ಮಾನಿಸಿದೆ. ಇದಕ್ಕೆ ಕಾರಣವನ್ನೂ ಕಂಪನಿ ಬಹಿರಂಗಪಡಿಸಿದೆ.
ಚೀನಾ ಮೂಲದ ವಿವೊ ಕಂಪನಿ ಮೇಲೆ ಇಡಿ ಕಣ್ಣಿಟ್ಟಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿವೊ ಕಂಪನಿಯನ್ನು ಸದ್ಯದಲ್ಲೇ ವಿಚಾರಣೆಗೊಳಪಡಿಸುವ ಸಾಧ‍್ಯತೆಯಿದೆ. ಈ ಕಾರಣಕ್ಕೆ ಕೊಹ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳನ್ನು ಪ್ರಸಾರ ಮಾಡದೇ ಇರಲು ವಿವೊ ತೀರ್ಮಾನಿಸಿದೆಯಂತೆ.