Select Your Language

Notifications

webdunia
webdunia
webdunia
Saturday, 19 April 2025
webdunia

ನಾಮದ ಬಲದಲ್ಲಿ ಆಟಗಾರರನ್ನು ತಂಡದಲ್ಲಿಟ್ಟುಕೊಳ್ಳಲಾಗದು: ಕೊಹ್ಲಿಗೆ ಟಾಂಗ್ ಕೊಟ್ಟ ವೆಂಕಟೇಶ್ ಪ್ರಸಾದ್

ವೆಂಕಟೇಶ್ ಪ್ರಸಾದ್
ಮುಂಬೈ , ಸೋಮವಾರ, 11 ಜುಲೈ 2022 (10:00 IST)
ಮುಂಬೈ:  ರನ್ ಬರಗಾಲ ಎದುರಿಸುತ್ತಿರುವ ವಿರಾಟ್ ಕೊಹ್ಲಿಯನ್ನು ಆಡುವ ಬಳಗದಿಂದ ಹೊರಗಿಡಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ. ಇದೀಗ ಕರ್ನಾಟಕ ಮೂಲದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಈ ಒತ್ತಾಯಕ್ಕೆ ಧ್ವನಿಗೂಡಿಸಿದ್ದಾರೆ.

ಈ ಹಿಂದೆ ಸೆಹ್ವಾಗ್, ಸೌರವ್ ಗಂಗೂಲಿ, ಜಹೀರ್ ಖಾನ್, ಹರ್ಭಜನ್ ಮುಂತಾದ ಘಟಾನುಘಟಿ ಆಟಗಾರರನ್ನೂ ಫಾರ್ಮ್ ಕೊರತೆ ಎದುರಿಸಿದ್ದಾಗ ತಂಡದಿಂದ ಕಿತ್ತು ಹಾಕಲಾಗಿತ್ತು ಎಂದು ವೆಂಕಟೇಶ್ ‍ಪ್ರಸಾದ್ ಹೇಳಿದ್ದಾರೆ.

‘ನೀವು ಕಳಪೆ ಫಾರ್ಮ್ ನಲ್ಲಿದ್ದಾಗ ಎಷ್ಟೇ ದೊಡ್ಡ ಹೆಸರು ಮಾಡಿದ್ದರೂ ತಂಡದಿಂದ ಹೊರನಡೆಯಲೇಬೇಕು. ಇದಕ್ಕೆ ಸೆಹ್ವಾಗ್, ಗಂಗೂಲಿ, ಭಜಿ, ಜಹೀರ್ ನಂತಹ ಆಟಗಾರರೂ ಹೊರತಾಗಿರಲಿಲ್ಲ. ಸ್ವತಃ ಅನಿಲ್ ಕುಂಬ್ಳೆ ಎಷ್ಟೋ ಬಾರಿ ಬೆಂಚ್ ಕಾಯಿಸಿದ್ದರು. ಸಾಕಷ್ಟು ಪ್ರತಿಭಾವಂತ ಯುವ ಪ್ರತಿಭೆಗಳಿರುವಾಗ ಕೇವಲ ನಾಮದ ಬಲದಿಂದ ತಂಡದಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ’ ಎಂದು ವೆಂಕಟೇಶ್ ಪ್ರಸಾದ್ ಕೊಹ್ಲಿಗೆ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರವೀಂದ್ರ ಜಡೇಜಾ ಮುನಿಸು ಸಿಎಸ್ ಕೆ ಮೇಲಲ್ಲ! ಧೋನಿ ಜೊತೆಗೆ?!