Publish Date: Tue, 12 Jul 2022 (09:20 IST)
Updated Date: Tue, 12 Jul 2022 (09:32 IST)
ಲಂಡನ್: ಸತತ ವೈಫಲ್ಯದಿಂದ ತೀವ್ರ ಟೀಕೆ ಎದುರಿಸುತ್ತಿರುವ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಗಾಯವಾಗಿದ್ದು, ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಕೊಹ್ಲಿಯನ್ನು ತಂಡದಿಂದ ಕಿತ್ತು ಹಾಕಬೇಕು ಎಂಬ ಮಾಜಿ ಕ್ರಿಕೆಟಿಗರ ಒತ್ತಾಯದ ಬೆನ್ನಲ್ಲೇ ರೋಹಿತ್ ಶರ್ಮಾ ತಿರುಗೇಟು ನೀಡಿದ್ದರು. ಇದೀಗ ಅದಕ್ಕೆ ತಕ್ಕಂತೇ ಕೊಹ್ಲಿಯೂ ಗಾಯಗೊಂಡಿರುವುದರಿಂದ ಇಂದಿನ ಪಂದ್ಯಕ್ಕೆ ಅವರ ಅಲಭ್ಯರಾಗುವ ಸಾಧ್ಯತೆಯಿದೆ.
ತೊಡೆಸಂಧು ನೋವಿನಿಂದ ಬಳಲುತ್ತಿರುವ ಕೊಹ್ಲಿ ಗಾಯದ ಗಂಭೀರತೆ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಹಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಅವರು ಇಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.