Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್-ಅಥಿಯಾ ಮದುವೆ ಬಗ್ಗೆ ಹೀಗೊಂದು ಗುಸು ಗುಸು!

ಕೆಎಲ್ ರಾಹುಲ್-ಅಥಿಯಾ ಮದುವೆ ಬಗ್ಗೆ ಹೀಗೊಂದು ಗುಸು ಗುಸು!
ಬೆಂಗಳೂರು , ಬುಧವಾರ, 13 ಜುಲೈ 2022 (08:30 IST)
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಡೇಟಿಂಗ್ ನಲ್ಲಿರುವ ವಿಚಾರ ಈಗ ಗುಟ್ಟಾಗೇನೂ ಉಳಿದಿಲ್ಲ.

ಇದೀಗ ಈ ಜೋಡಿ ಜೀವಗಳು ಮುಂದಿನ ಮೂರು ತಿಂಗಳ ಬಳಿಕ ಮದುವೆಯಾಗಲಿರುವುದಾಗಿ ಸುದ್ದಿಯೊಂದು ಹರಿದಾಡುತ್ತಿದೆ.

ಸದ್ಯಕ್ಕೆ ಕೆಎಲ್ ರಾಹುಲ್ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಅವರ ಜೊತೆಗೆ ಅಥಿಯಾ ಕೂಡಾ ವಿದೇಶಕ್ಕೆ ತೆರಳಿದ್ದರು. ಇತ್ತೀಚೆಗೆ ರಾಹುಲ್ ತಂದೆ-ತಾಯಿ ಸುನಿಲ್ ಶೆಟ್ಟಿ ಕುಟುಂಬಸ್ಥರನ್ನು ಮುಂಬೈನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರಂತೆ. ಹೀಗಾಗಿ ಮುಂದಿನ ಮೂರು ತಿಂಗಳೊಳಗಾಗಿ ಮುಂಬೈನಲ್ಲಿ ಮದುವೆ ನಡೆಯಲಿದೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಬಳಿಕ ಏಕದಿನದಲ್ಲೂ ಮುಂದುವರಿದ ಟೀಂ ಇಂಡಿಯಾ ಬೌಲರ್ ಗಳ ಅಬ್ಬರ