Select Your Language

Notifications

webdunia
webdunia
webdunia
webdunia

ಟಿ20 ಬಳಿಕ ಏಕದಿನದಲ್ಲೂ ಮುಂದುವರಿದ ಟೀಂ ಇಂಡಿಯಾ ಬೌಲರ್ ಗಳ ಅಬ್ಬರ

ಟಿ20 ಬಳಿಕ ಏಕದಿನದಲ್ಲೂ ಮುಂದುವರಿದ ಟೀಂ ಇಂಡಿಯಾ ಬೌಲರ್ ಗಳ ಅಬ್ಬರ
ಲಂಡನ್ , ಬುಧವಾರ, 13 ಜುಲೈ 2022 (08:10 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಕರಾಮತ್ತಿನಿಂದ ಭರ್ಜರಿಯಾಗಿ 10 ವಿಕೆಟ್ ಗಳ ಗೆಲುವು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಕೇವಲ 25.2 ಓವರ್ ಗಳಲ್ಲಿ 110 ರನ್ ಗಳಿಗೆ ಆಲೌಟ್ ಆಯಿತು. ಜಸ್ಪ್ರೀತ್ ಬುಮ್ರಾ ಭರ್ಜರಿ ಬೌಲಿಂಗ್ ನಡೆಸಿ 6 ವಿಕೆಟ್ ತಮ್ಮದಾಗಿಸಿಕೊಂಡರು. ಅದರಲ್ಲೂ ಪ್ರಮುಖ ಬ್ಯಾಟಿಗ ಜೋ ರೂಟ್, ಲಿವಿಂಗ್ ಸ್ಟೋನ್ ರನ್ನು ಶೂನ್ಯಕ್ಕೆ ಪೆವಿಲಿಯನ್ ಗೆ ಕಳುಹಿಸಿದ್ದು ಗಮನಾರ್ಹ. ಇವರಿಗೆ ತಕ್ಕ ಸಾಥ್ ನೀಡಿದ ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿದರು. ಪ್ರಸಿದ್ಧ ಕೃಷ್ಣ ಕೇವಲ 1 ವಿಕೆಟ್ ತಮ್ಮದಾಗಿಸಿಕೊಂಡರು. ಇದ್ದವರಲ್ಲಿ ಜೋಸ್ ಬಟ್ಲರ್ ಮಾತ್ರ 30 ರನ್ ಗಳಿಸಿ ಸುಧಾರಿತ ಪ್ರದರ್ಶನ ನೀಡಿದರು. ಕೊನೆಯಲ್ಲಿ ವಿಲ್ಲಿ 21, ಬ್ರೈಡನ್ ಕಾರ್ಸ್ 15 ರನ್ ಗಳಿಸದೇ ಹೋದರೆ ಇಂಗ್ಲೆಂಡ್ ಮೊತ್ತ 100 ಕೂಡಾ ದಾಟುತ್ತಿರಲಿಲ್ಲ.

ಬಹಳ ಕಾಲದ ಬಳಿಕ ಟೀಂ ಇಂಡಿಯಾ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ ಈ ಮೊತ್ತವನ್ನು 18.4 ಓವರ್ ಗಳಲ್ಲಿಯೇ 114 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿಸಿತು. ಧವನ್ ಕೊಂಚ ನಿಧಾನಗತಿಯ ಇನಿಂಗ್ಸ್ ಆಡಿದರು. 54 ಎಸೆತ ಎದುರಿಸಿದ ಅವರು 31 ರನ್ ಗಳಿಸಿದರು. ಆದರೆ ರೋಹಿತ್ ಶರ್ಮಾ ತಮ್ಮ ಹಿಟ್ ಮ್ಯಾನ್ ಅವತಾರ ತಾಳಿದರು. ಕೇವಲ 58 ಎಸೆತಗಳಲ್ಲಿ 76 ರನ್ ಚಚ್ಚಿದರು. ಇದರಲ್ಲಿ 5 ಸಿಕ್ಸರ್ ಸೇರಿತ್ತು. ಈ ಮೂಲಕ ರೋಹಿತ್ ಟೀಕಾಕಾರರಿಗೆ ಪ್ರತ್ಯುತ್ತರವನ್ನೂ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಏಕದಿನ: ಟಾಸ್ ಗೆದ್ದ ಟೀಂ ಇಂಡಿಯಾ