Publish Date: Wed, 13 Jul 2022 (09:20 IST)
Updated Date: Wed, 13 Jul 2022 (09:31 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಗೆಲುವಿನ ರೂವಾರಿ ಜಸ್ಪ್ರೀತ್ ಬುಮ್ರಾ ಪಂದ್ಯದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.
ಮೊದಲ ಪಂದ್ಯದಲ್ಲಿ 6 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠರಾದ ಜಸ್ಪ್ರೀತ್ ಬುಮ್ರಾ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.
ವರದಿಗಾರರೊಬ್ಬರು ತಾವು ಆರು ವರ್ಷದ ಹಿಂದೆ ನಾನು ಸಂದರ್ಶನ ನಡೆಸಿದಾಗ ಎಷ್ಟು ಆತ್ಮವಿಶ್ವಾಸದಿಂದಿದ್ದಿರೋ ಈಗಲೂ ಹಾಗೇ ಇದ್ದೀರಿ ಎಂದು ವಿವರಿಸಿದರು. ಆಗ ನಗುತ್ತಲೇ ಉತ್ತರಿಸಿದ ಬುಮ್ರಾ, ಆರು ವರ್ಷದ ಹಿಂದೆ ನಾನು ಏನು ಹೇಳಿದ್ದೆ ಎಂಬುದು ನನಗೇ ನೆನಪಿಲ್ಲ. ಆದರೆ ನಾನು ವರ್ತಮಾನದಲ್ಲಿ ಇರಲು ಬಯಸುತ್ತೇನೆ. ಹೊರಗಿನ ಟೀಕೆ-ಟಿಪ್ಪಣಿಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ನನ್ನ ಆಟದ ಬಗ್ಗೆ ಗಮನ ಕೇಂದ್ರೀಕರಿಸುತ್ತೇನೆ ಎಂದಿದ್ದಾರೆ.