Publish Date: Thu, 17 Feb 2022 (10:23 IST)
Updated Date: Thu, 17 Feb 2022 (10:31 IST)
ಕೋಲ್ಕೊತ್ತಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಯುವ ಕ್ರಿಕೆಟಿಗ ರವಿ ಬಿಷ್ಣೋಯ್ ಗೆ ಭರಪೂರ ಹೊಗಳಿಕೆಯ ಮಾತನಾಡಿದ್ದಾರೆ.
ಚೊಚ್ಚಲ ಪಂದ್ಯದಲ್ಲೇ ಎರಡು ವಿಕೆಟ್ ಕಿತ್ತು ಮಿಂಚಿದ ರವಿ ಬಿಷ್ಣೋಯ್ ಟೀಂ ಇಂಡಿಯಾದ ಭವಿಷ್ಯದ ಸ್ಟಾರ್ ಎಂದು ರೋಹಿತ್ ಶರ್ಮಾ ಪಂದ್ಯದ ಬಳಿಕ ಹೊಗಳಿದ್ದಾರೆ.
ಈ ಬಾರಿ ಐಪಿಎಲ್ ನಲ್ಲೂ ರವಿ ಬಿಷ್ಣೋಯ್ ಉತ್ತಮ ಮೊತ್ತಕ್ಕೇ ಹರಾಜಾಗಿದ್ದರು. ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಉಪಯುಕ್ತರಾಗಬಲ್ಲ ರವಿ ಬಿಷ್ಣೋಯ್ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾಗೆ ಉತ್ತಮ ಆಯ್ಕೆಯಾಗಲಿದ್ದಾರೆ ಎಂದು ರೋಹಿತ್ ಹೊಗಳಿದ್ದಾರೆ.