ಕೋಲ್ಕೊತ್ತಾ: ರನ್ ಗಳಿಸಲು ಒದ್ದಾಡುತ್ತಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ನಾಯಕ ರೋಹಿತ್ ಶರ್ಮಾ ಖಾರವಾಗಿ ಉತ್ತರಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಗೆ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುವಾಗ ರೋಹಿತ್ ಗೆ ಪತ್ರಕರ್ತರು ಕೊಹ್ಲಿ ಫಾರ್ಮ್ ಬಗ್ಗೆ ಪ್ರಶ್ನಿಸಿದರು.
ಇದಕ್ಕೆ ಕೊಂಚ ಅಸಮಾಧಾನಗೊಂಡ ರೋಹಿತ್ ನೀವು ಮಾಧ್ಯಮಗಳು ಸುಮ್ಮನಿದ್ದರೆ ಕೊಹ್ಲಿ ತಾನಾಗಿಯೇ ಸರಿ ಹೋಗುತ್ತಾರೆ. ಅವರಿಗೆ ಸ್ವಲ್ಪ ಮಾನಸಿಕವಾಗಿ ನಿರಾಳವಾಗಲು ಅವಕಾಶ ಕೊಡಿ. ಅವರು ಈ ತಂಡದ ಜೊತೆಗೆ ಒಂದು ದಶಕದಿಂದ ಇದ್ದಾರೆ. ಇಷ್ಟು ಸಮಯ ಕ್ರಿಕೆಟ್ ಆಡಿರುವ ಅವರಿಗೆ ಒತ್ತಡವನ್ನು ನಿಭಾಯಿಸುವುದು ಹೇಗೆ ಎಂದು ಹೊಸದಾಗಿ ಹೇಳಿಕೊಡಬೇಕಾಗಿಲ್ಲ. ಎಲ್ಲವೂ ನಿಮ್ಮಿಂದಲೇ ಶುರುವಾಗೋದು. ನೀವು ಸುಮ್ಮನಿದ್ರೆ ಎಲ್ಲವೂ ಸರಿ ಹೋಗುತ್ತೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.