ಅಹಮ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರೂ ಇನಿಂಗ್ಸ್ ಗಳಲ್ಲಿ ಕಳಪೆ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಈಗ ಹಿಂದೆಂದೂ ಕಾಣದ ಕುಖ್ಯಾತಿಗೊಳಗಾಗಿದ್ದಾರೆ.
ಒಟ್ಟು ಮೂರು ಪಂದ್ಯಗಳಿಂದ ಅವರು ಗಳಿಸಿದ್ದು ಕೇವಲ 26 ರನ್. ಅವರು ಈ ರೀತಿ ದಯನೀಯ ವೈಫಲ್ಯ ಅನುಭವಿಸಿದ್ದು ಏಳು ವರ್ಷಗಳ ಹಿಂದೆ. ಅಂದರೆ 2015 ರ ಬಳಿಕ ಇದೇ ಮೊದಲ ಬಾರಿಗೆ ಕೊಹ್ಲಿ ಈ ಮಟ್ಟಿಗೆ ಒಂದು ಸರಣಿಯಲ್ಲಿ ವೈಫಲ್ಯ ಅನುಭವಿಸಿರುವುದು. ಆಗ ಅವರು ಕನಿಷ್ಠ ಪಕ್ಷ ಒಂದು ಸರಣಿಯಲ್ಲಿ 49 ರನ್ ಗಳಿಸಿದ್ದರು.
ಕಳೆದ ಎರಡು ವರ್ಷಗಳಿಂದ ಕೊಹ್ಲಿ ಯಾವುದೇ ಫಾರ್ಮ್ಯಾಟ್ ನಲ್ಲಿ ಶತಕ ಸಿಡಿಸಿಲ್ಲ ಎಂಬುದೂ ಗಮನಾರ್ಹ. ಕೊಹ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿರುವುದು ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದೆ.