Daily Horoscope

Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್, ಅಕ್ಸರ್ ಪಟೇಲ್ ವಿಂಡೀಸ್ ಟಿ20 ಸರಣಿಯಿಂದ ಔಟ್

ಕೆಎಲ್ ರಾಹುಲ್
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟಿ20 ಸರಣಿಯಿಂದ ಕೆಎಲ್ ರಾಹುಲ್, ಅಕ್ಸರ್ ಪಟೇಲ್ ಗಾಯದಿಂದಾಗಿ ಹೊರಬಿದ್ದಿದ್ದಾರೆ.

ದ್ವಿತೀಯ ಏಕದಿನ ಪಂದ್ಯದ ವೇಳೆ ಕೆಎಲ್ ರಾಹುಲ್ ಗೆ ಸ್ನಾಯು ಸೆಳೆತವಾಗಿದ್ದು, ಈ ಕಾರಣಕ್ಕೆ ಅವರು ಸರಣಿಯಿಂದ ಹೊರಬಿದ್ದಿದ್ದಾರೆ. ಇನ್ನು, ಅಕ್ಸರ್ ಪಟೇಲ್ ಕೊರೋನಾದಿಂದ ಇನ್ನಷ್ಟೇ ಚೇತರಿಸಿಕೊಳ್ಳಬೇಕಾಗಿದೆ.

ಹೀಗಾಗಿ ಇಬ್ಬರೂ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ವಿಪರ್ಯಾಸವೆಂದರೆ ಅಕ್ಸರ್ ಪಟೇಲ್ ಗಾಯದಿಂದಾಗಿ ಕಳೆದ ಕೆಲವು ದಿನಗಳಿಂದ ಮೈದಾನಕ್ಕಿಳಿದಿಲ್ಲ. ಕೆಎಲ್ ರಾಹುಲ್ ಕೂಡಾ ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡವರು. ಇದೀಗ ಮತ್ತೆ ಗಾಯದಿಂದಾಗಿ ಸರಣಿಯಿಂದ ಹೊರಗುಳಿಯಬೇಕಾಗಿದೆ. ಬುಧವಾರದಿಂದ ಟಿ20 ಸರಣಿ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022 ಮೆಗಾ ಹರಾಜು ಇಂದು, ನಾಳೆ