ಅಹಮ್ಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 265 ರನ್ ಗಳಿಸಿ ಆಲೌಟ್ ಆಗಿದೆ.
ಟೀಂ ಇಂಡಿಯಾಕ್ಕೆ ಆರಂಭಿಕರು ಕೈ ಕೊಟ್ಟರು. ರೋಹಿತ್ 13 ರನ್ ಗಳಿಸಿ ಔಟಾದರೆ ಅವರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡಾ ಶೂನ್ಯಕ್ಕೆ ನಿರ್ಗಮಿಸಿ ಆರಂಭಿಕ ಆಘಾತಕ್ಕೆ ಕಾರಣವಾದರು. ಇನ್ನೊಬ್ಬ ಆರಂಭಿಕ ಶಿಖರ್ ಧವನ್ ಕೂಡಾ ಕೇವಲ 10 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
ಆದರೆ ಬಳಿಕ ಕೂಡಿಕೊಂಡ ಶ್ರೇಯಸ್ ಐಯರ್-ರಿಷಬ್ ಪಂತ್ ಜೋಡಿ ಭಾರತಕ್ಕೆ ಚೇತರಿಕೆ ನೀಡಿದರು. ಶ್ರೇಯಸ್ 80 ರನ್ ಗಳಿಸಿದರೆ ರಿಷಬ್ ಪಂತ್ 56 ರನ್ ಗಳ ಕಾಣಿಕೆ ನೀಡಿದರು. ಮೊನ್ನೆಯ ಪಂದ್ಯದ ಹೀರೋ ಸೂರ್ಯಕುಮಾರ್ ಯಾದವ್ ಕೇವಲ 6 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಆಲ್ ರೌಂಡರ್ ದೀಪಕ್ ಚಹರ್ 38, ವಾಷಿಂಗ್ಟನ್ ಸುಂದರ್ 33 ರನ್ ಗಳಿಸಿ ಮಿಂಚಿದರು.