Select Your Language

Notifications

webdunia
webdunia
webdunia
Wednesday, 2 April 2025
webdunia

ವಿಂಡೀಸ್ ಟಿ20 ಸರಣಿಗೆ ಮುನ್ನ ವಾಷಿಂಗ್ಟನ್ ಸುಂದರ್ ಗೆ ಗಾಯ, ಕುಲದೀಪ್ ಗೆ ಕರೆ

ವಾಷಿಂಗ್ಟನ್ ಸುಂದರ್
ಕೋಲ್ಕೊತ್ತಾ , ಮಂಗಳವಾರ, 15 ಫೆಬ್ರವರಿ 2022 (09:50 IST)
ಕೋಲ್ಕೊತ್ತಾ: ವೆಸ್ಟ್ ಇಂಡೀಸ್ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಟಿ20 ಸರಣಿಯಿಂದ ಟೀಂ ಇಂಡಿಯಾ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಹೊರಬಿದ್ದಿದ್ದಾರೆ.

ಮಂಡಿ ನೋವಿಗೊಳಗಾಗಿರುವ  ವಾಷಿಂಗ್ಟನ್ ಸುಂದರ್ ಸರಣಿಯಿಂದ ಹೊರ ನಡೆದಿದ್ದು, ಅವರ ಸ್ಥಾನಕ್ಕೆ ಕುಲದೀಪ್ ಯಾದವ್ ಗೆ ಕರೆ ನೀಡಲಾಗಿದೆ.

ಕುಲದೀಪ್ ಏಕದಿನ ಸರಣಿಯಲ್ಲಿ ಆಡಿದ್ದರು. ಇದೀಗ ಅದೇ ಪ್ರದರ್ಶನದ ಆಧಾರದಲ್ಲಿ ಟಿ20 ಸರಣಿಯಲ್ಲಿ ಅವಕಾಶ ನೀಡಲಾಗಿದೆ. ಇದಕ್ಕೂ ಮೊದಲು ಕೆಎಲ್ ರಾಹುಲ್, ಅಕ್ಸರ್ ಪಟೇಲ್ ಗಾಯದ ಕಾರಣದಿಂದ ಟಿ20 ಸರಣಿಯಿಂದ ಹೊರಬಿದ್ದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಈ ಮೂವರಲ್ಲಿ ಆರ್ ಸಿಬಿ ನಾಯಕ ಯಾರು?