Publish Date: Wed, 16 Feb 2022 (08:50 IST)
Updated Date: Wed, 16 Feb 2022 (09:11 IST)
ಕೋಲ್ಕೊತ್ತಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ ಈಡನ್ ಗಾರ್ಡನ್ ನಲ್ಲಿ ಆರಂಭವಾಗಲಿದೆ.
ಏಕದಿನ ಸರಣಿ ಸೋತಿರುವ ವಿಂಡೀಸ್ ಈಗ ಟಿ20 ಸರಣಿಯಲ್ಲಿ ಗೆದ್ದು ಮಾನ ಉಳಿಸಿಕೊಳ್ಳುವ ಆತುರದಲ್ಲಿದೆ. ಟಿ20 ಕ್ರಿಕೆಟ್ ನಲ್ಲಿ ವಿಂಡೀಸ್ ನ್ನು ಹಗುರವಾಗಿ ಪರಿಗಣಿಸುವಂತಿಲ್ಲ.
ಟೀಂ ಇಂಡಿಯಾಗೆ ಬಿಗ್ ಪ್ಲೇಯರ್ಸ್ ರನ್ ಗಳಿಸುವುದು ಅನಿವಾರ್ಯ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಏಕದಿನ ಸರಣಿಯಲ್ಲಿ ರನ್ ಗಳಿಸಿಲ್ಲ. ಆ ಕೊರತೆಯನ್ನು ಇಲ್ಲಿ ನೀಗಿಸಬೇಕಿದೆ. ಬೌಲರ್ ಗಳು ಉತ್ತಮ ಫಾರ್ಮ್ ನಲ್ಲಿದ್ದು, ಮಧ‍್ಯಮ ಕ್ರಮಾಂಕವೂ ಬಲವಾಗಿರುವುದು ಟೀಂ ಇಂಡಿಯಾಗೆ ಪ್ಲಸ್ ಪಾಯಿಂಟ್. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.