Publish Date: Thu, 17 Feb 2022 (08:50 IST)
Updated Date: Thu, 17 Feb 2022 (09:21 IST)
ಚೆನ್ನೈ: ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ದೇಶೀಯ ಟೆಸ್ಟ್ ಕ್ರಿಕೆಟ್ ರಣಜಿ ಟ್ರೋಫಿ ನಡೆದಿರಲಿಲ್ಲ. ಆದರೆ ಈಗ ಅದಕ್ಕೆ ಕಾಲ ಕೂಡಿಬಂದಿದೆ.
ಕೊರೋನಾ ಕಾರಣದಿಂದಾಗಿ ಜೈವಿಕ ಸುರಕ್ಷಾ ವಲಯದಲ್ಲಿ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ರಣಜಿ ಕ್ರಿಕೆಟ್ ಟೂರ್ನಿ ಇಂದಿನಿಂದ ಆರಂಭವಾಗಲಿದೆ. ವಿವಿಧ ತಂಡಗಳು ಇಂದಿನಿಂದ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಕರ್ನಾಟಕ ಇಂದು ಮೊದಲ ಲೀಗ್ ಪಂದ್ಯದಲ್ಲಿ ರೈಲ್ವೇಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ರೈಲ್ವೇಸ್ ಮೊದಲು ಕರ್ನಾಟಕವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ. ಕಳೆದ ಬಾರಿ ಸಾಧಾರಣ ಪ್ರದರ್ಶನ ನೀಡಿದ್ದ ಕರ್ನಾಟಕದಲ್ಲಿ ಈ ಬಾರಿ ಯುವ ಪ್ರತಿಭೆಗಳೇ ತುಂಬಿದ್ದಾರೆ. ಹೀಗಾಗಿ ಈ ಬಾರಿಯ ರಾಜ್ಯದ ಹುಡುಗರ ಮೇಲೆ ನಿರೀಕ್ಷೆ ಹೆಚ್ಚಿದೆ.