Publish Date: Sat, 15 Dec 2018 (09:33 IST)
Updated Date: Sat, 15 Dec 2018 (15:47 IST)
ಪರ್ತ್: ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಸ್ಲೆಡ್ಜಿಂಗ್ ಮಾಡುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಅವರು ಅದನ್ನೇ ಮುಂದುವರಿಸಿದ್ದಾರೆ.
ಆಸ್ಟ್ರೇಲಿಯಾದ ಎರಡು ವಿಕೆಟ್ ಉರುಳುತ್ತಿದ್ದಂತೇ ಜೋರು ಜೋರಾಗಿ ವಿಕೆಟ್ ಹಿಂದುಗಡೆ ನಿಂತು ಮಾತನಾಡುತ್ತಿದ್ದ ರಿಷಬ್ ಒಂದು ಹಂತದಲ್ಲಿ ಸ್ವತಃ ನಾಯಕ ವಿರಾಟ್ ಕೊಹ್ಲಿಗೇ ಟಾಂಗ್ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.
ಹನುಮ ವಿಹಾರಿ ಬೌಲಿಂಗ್ ಬಗ್ಗೆ ಕಾಮೆಂಟ್ ಮಾಡಿದ ರಿಷಬ್ ‘ಅವರು ನಿಮ್ಮ ಯೋಜನೆ ಪ್ರಕಾರವೇ ಬೌಲಿಂಗ್ ಮಾಡುತ್ತಿದ್ದಾರೆ. ನೀವೇ ಅವರಿಗೆ ಕಟ್ ಬೌಲಿಂಗ್ ಮಾಡಲು ಹೇಳಿದಿರಿ. ಈಗ ಸ್ವಲ್ಪ ಪಿಚ್ ಅಪ್ ಬೌಲಿಂಗ್ ಮಾಡಲು ಹೇಳಿ’ ಎಂದು ಕೊಹ್ಲಿಗೇ ರಿಷಬ್ ಸಲಹೆ ಕೊಡುತ್ತಿರುವ ಸಂಭಾಷಣೆ ಸ್ಟಂಪ್ ಮೈಕ್ರೋಫೋನ್ ನಲ್ಲಿ ಕೇಳಿಬಂದಿದೆ.
ಆದರೆ ಹನುಮ ವಿಹಾರಿ ಮೊದಲಿನಂತೇ ಬೌಲಿಂಗ್ ಮುಂದುವರಿಸಿದ್ದಾರೆ. ವಿಶೇಷವೆಂದರೆ ಪಂತ್ ಹೀಗೆ ಹೇಳಿದ ಕೆಲವೇ ಕ್ಷಣಗಳಲ್ಲಿ ಅದೇ ಹನುಮ ವಿಹಾರಿ ಬೌಲಿಂಗ್ ನಲ್ಲಿ ಸುಲಭ ಕ್ಯಾಚ್ ಒಂದನ್ನು ಕೈ ಬಿಟ್ಟರು. ಹೀಗಾಗಿ ರಿಷಬ್ ಮಾತು ಕಡಿಮೆ ಮಾಡಿ ತಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನ ಕೊಟ್ಟರೆ ಟೀಂ ಇಂಡಿಯಾಕ್ಕೆ ಒಳಿತು!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ