Publish Date: Thu, 13 Dec 2018 (10:44 IST)
Updated Date: Thu, 13 Dec 2018 (10:46 IST)
ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆಯಿಂದ ಪರ್ತ್ ನ ಮೈದಾನದಲ್ಲಿ ದ್ವಿತೀಯ ಟೆಸ್ಟ್ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ತನ್ನ ಸಂಭಾವ್ಯ 13 ಆಟಗಾರರ ತಂಡ ಪ್ರಕಟಿಸಿದೆ.
ಶಾಕಿಂಗ್ ಎಂದರೆ ಈ ಪಂದ್ಯದಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಡುತ್ತಿಲ್ಲ. ಅಶ್ವಿನ್ ಕಳೆದ ಪಂದ್ಯದಲ್ಲಿ ಪರಿಣಾಮಕಾರಿ ಬೌಲಿಂಗ್ ನಡೆಸಿ ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ಬ್ರೇಕ್ ನೀಡಿದ್ದರು. ಆದರೆ ಅವರು ಕೆಳಹೊಟ್ಟೆಯ ನೋವಿನಿಂದ ಬಳಲುತ್ತಿದ್ದು ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅಶ್ವಿನ್ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ಆಡುವ ನಿರೀಕ್ಷೆಯಿದೆ.
ಅವರಂತೆಯೇ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡಾ ಬೆನ್ನು ನೋವಿನ ಕಾರಣದಿಂದ ದ್ವಿತೀಯ ಪಂದ್ಯದಲ್ಲಿ ಆಡುತ್ತಿಲ್ಲ. ಇನ್ನು, ಪೃಥ್ವಿ ಶಾ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಕಳೆದ ಪಂದ್ಯ ಆಡದಿದ್ದ ಉಮೇಶ್ ಯಾದವ್ ಮತ್ತು ಭುವನೇಶ‍್ವರ್ ಕುಮಾರ್ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಇದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ