Publish Date: Thu, 13 Dec 2018 (09:55 IST)
Updated Date: Thu, 13 Dec 2018 (09:57 IST)
ಪರ್ತ್: ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ಹತಾಶೆಯಲ್ಲಿರುವ ಆಸ್ಟ್ರೇಲಿಯಾ ತಂಡದೊಳಗೆ ಇದೀಗ ಭಿನ್ನಮತ ಹೊಸ ವಿಷಯವಲ್ಲ. ಆದರೆ ನಾಯಕ ಟಿಮ್ ಪೇಯ್ನ್ ಟಾರ್ಗೆಟ್ ಮಾಡಿದ್ದ ವೇಗಿ ಮಿಚೆಲ್ ಸ್ಟಾರ್ಕ್ ಗೆ ಇದೀಗ ತಂಡದಿಂದ ಕೊಕ್ ಸಿಗುವ ಸಾಧ್ಯತೆಯಿದೆ.
ಮಿಚೆಲ್ ಸ್ಟಾರ್ಕ್ ತಮ್ಮ ಅನುಭವ, ಖ್ಯಾತಿಗೆ ತಕ್ಕಂತೆ ಆಡಲಿಲ್ಲ ಎಂದು ನಾಯಕ ಟಿಮ್ ಪೇಯ್ನ್ ಟೀಕಿಸಿದ ಬೆನ್ನಲ್ಲೇ ಅವರನ್ನು ಮುಂದಿನ ಪಂದ್ಯಕ್ಕೆ ಕೈ ಬಿಡುವ ಸಾಧ್ಯತೆ ಎದುರಾಗಿದೆ.
ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಆಯ್ಕೆಗಾರ ಮಾರ್ಕ್ ವಾ ಕೂಡಾ ಹೇಳಿಕೆ ನೀಡಿದ್ದು, ಫಾರ್ಮ್ ನಲ್ಲಿಲ್ಲದ ಸ್ಟಾರ್ಕ್ ರನ್ನು ಕೈ ಬಿಡುವ ಸಾಧ್ಯತೆಯಿದೆ ಎಂದಿದ್ದಾರೆ. ಸ್ಟಾರ್ಕ್ ಕೊಂಚ ಕರಾರುವಾಕ್ ಬೌಲಿಂಗ್ ಮಾಡಬೇಕಿದೆ. ಅಲ್ಲಿಯವರೆಗೆ ಅವರನ್ನು ತಂಡದಿಂದ ಕೈ ಬಿಡುವುದೇ ಒಳ್ಳೆಯದು ಎಂದು ಮಾರ್ಕ್ ವಾ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ