ಪರ್ತ್: ಒಂದೆಡೆ ಉರಿಬಿಸಿಲು, ಇನ್ನೊಂದೆಡೆ ಆಸ್ಟ್ರೇಲಿಯನ್ ಬ್ಯಾಟ್ಸ್ ಮನ್ ಗಳ ದಿಟ್ಟ ಆಟ. ಮತ್ತೊಂದೆಡೆ ಸ್ಪಿನ್ನರ್ ಗಳಿಲ್ಲದೇ ಬೆವರು ಸುರಿಸಿದ ವೇಗಿಗಳು. ಒಟ್ಟಾರೆ ಟೀಂ ಇಂಡಿಯಾ ಪಾಲಿಗೆ ದ್ವಿತೀಯ ಟೆಸ್ಟ್ ನ ಮೊದಲ ದಿನವೇ ಸುಸ್ತಾಗುವಂತೆ ಮಾಡಿದೆ.
ಮೊದಲ ದಿನದ ಮೊದಲ ಅವಧಿಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಇತ್ತೀಚೆಗಿನ ವರದಿ ಬಂದಾಗಿ ವಿಕೆಟ್ ನಷ್ಟವಿಲ್ಲದೇ 54 ರನ್ ಗಳಿಸಿದೆ. ಏರನ್ ಫಿಂಚ್ 21 ಮತ್ತು ಮಾರ್ಕಸ್ ಹ್ಯಾರಿಸ್ 32 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಅಚ್ಚರಿಯ ಬೆಳವಣಿಗೆಯೆಂದರೆ ಈ ಪಂದ್ಯದಲ್ಲಿ ಭಾರತ ಸ್ಪಿನ್ನರ್ ಗಳಿಲ್ಲದೇ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದಿದೆ. ಪರ್ತ್ ಹೇಳಿ ಕೇಳಿ ಉರಿಬಿಸಿಲಿಗೆ ಹೆಸರಾದ ಊರು. ನಾಲ್ವರು ವೇಗಿಗಳು ಈ ವೇಗದ ಪಿಚ್ ನಲ್ಲಿ ಸಂಪೂರ್ಣ ಪಂದ್ಯದಲ್ಲಿ ಬೌಲಿಂಗ್ ಮಾಡಬೇಕಿದ್ದು, ಅವರ ಫಿಟ್ನೆಸ್ ಗೆ ಅಗ್ನಿ ಪರೀಕ್ಷೆಯಾಗಿಲದೆ. ಬೌಲರ್ ಗಳು ಮಾತ್ರವಲ್ಲ, ನಾಯಕ ವಿರಾಟ್ ಕೊಹ್ಲಿ ಕೂಡಾ ಉರಿಬಿಸಿಲು ತಾಳಲಾರದೇ ಆಗಾಗ ಬೆವರು ಒರೆಸಿಕೊಳ್ಳುವುದನ್ನು ನೋಡಿದರೆ ಇಲ್ಲಿನ ಹವಾಗುಣದ ಪರಿಸ್ಥಿತಿ ನೀವು ಅಂದಾಜಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಕೇವಲ ವೇಗಿಗಳನ್ನು ನೆಚ್ಚಿಕೊಂಡು ಟೀಂ ಇಂಡಿಯಾ ಕಣಕ್ಕಿಳಿದು ದೊಡ್ಡ ಪ್ರಮಾದವೆಸಗಿದೆ ಎನ್ನಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ