Publish Date: Sat, 15 Dec 2018 (09:30 IST)
Updated Date: Sat, 15 Dec 2018 (09:32 IST)
ಮುಂಬೈ: ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಮಾಡೆಲ್ ಹೇಝಲ್ ಕೀಚ್ ವಿವಾಹವಾಗಿ ಆಗಲೇ ಎರಡು ವರ್ಷ ಕಳೆದಿದೆ. ಈ ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದೆಯಾ?
ಇತ್ತೀಚೆಗಷ್ಟೇ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮದುವೆಗೆ ಬಂದಿದ್ದ ಈ ಜೋಡಿಯನ್ನು ನೋಡಿ ಇಂತಹದ್ದೊಂದು ರೂಮರ್ ಹುಟ್ಟಿಕೊಂಡಿದೆ. ಕೊನೆಗೆ ಇದಕ್ಕೀಗ ಸ್ವತಃ ಹೇಝಲ್ ಸ್ಪಷ್ಟನೆ ನೀಡಿದ್ದಾರೆ.
‘ಪ್ರತೀ ಬಾರಿ ನಾನು ಕೊಂಚ ದಪ್ಪಗಾದಾಗ ನಾನು ಗರ್ಭಿಣಿ ಎಂಬ ಸುದ್ದಿ ಹಬ್ಬುತ್ತದೆ. ಇದು ಬಹುಶಃ ನಾಲ್ಕೋ-ಐದನೆಯ ಬಾರಿ ಇರಬೇಕು. ಆದರೆ ನನಗೆ ಕೊಂಚ ಮುಜುಗರವಾಗುತ್ತಿದೆ. ಆದರೆ ಈ ಸುದ್ದಿಗಳೆಲ್ಲಾ ನಿಜವಲ್ಲ’ ಎಂದು ಹೇಝಲ್ ಸ್ಪಷ್ಟಪಡಿಸಿದ್ದಾರೆ. ಯಾವುದೇ ಸೆಲೆಬ್ರಿಟಿಗಳು ಮದುವೆಯಾದ ಮೇಲೆ ಗರ್ಭಿಣಿ ಎಂಬ ರೂಮರ್ ಗಳು ಆಗಾಗ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೂ ಇಂತಹದ್ದೇ ಪ್ರಶ್ನೆ ಎದುರಾಗಿತ್ತು. ಈಗ ಯುವಿ ಪತ್ನಿ ಸರದಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ