Publish Date: Sat, 19 Aug 2017 (10:57 IST)
Updated Date: Sat, 19 Aug 2017 (11:00 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಮೈದಾನದಲ್ಲಿ ಕೊಹ್ಲಿ v/s ಧೋನಿ ಎಂದು ಇಬ್ಭಾಗವಾಗಿದೆ!
ಮತ್ತೆ ಟೀಂ ಇಂಡಿಯಾದಲ್ಲಿ ಬಿರುಕಾ? ಎಂದು ತಲೆಕೆಡಿಸಿಕೊಳ್ಳಬೇಡಿ. ಇದು ಕಾಂಟ್ರವರ್ಸಿಯೇನೂ ಅಲ್ಲ. ಧೋನಿ ಮತ್ತು ಕೊಹ್ಲಿ ಎರಡು ತಂಡಗಳಾಗಿ ವಿಭಾಗವಾಗಿದ್ದು ಅಭ್ಯಾಸದ ಸಮಯದಲ್ಲಿ.
ಏಕದಿನ ಸರಣಿಗೆ ಮೊದಲು ಆಟಗಾರರ ಫಿಟ್ ನೆಸ್ ಲೆವೆಲ್ ಪರೀಕ್ಷಿಸಲು ತಂಡ ಫುಟ್ ಬಾಲ್ ಆಡಿದೆ. ಇದರಲ್ಲಿ ಧೋನಿ ತಂಡ ಮತ್ತು ಕೊಹ್ಲಿ ತಂಡ ಸೆಣಸಿದೆ. ಧೋನಿಗೆ ಫುಟ್ ಬಾಲ್ ಎಂದರೆ ತುಂಬಾನೇ ಇಷ್ಟ. ಹಾಗಾಗಿ ಇಷ್ಟದ ಆಟವನ್ನು ಖುಷಿ ಖುಷಿಯಿಂದಲೇ ಆಡುತ್ತಿರುವ ಫೋಟೋಗಳನ್ನು ಬಿಸಿಸಿಐ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದೆ.