Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕ್ರಿಕೆಟಿಗನಿಗೆ ಇದೆಲ್ಲಾ ಬೇಕಿತ್ತಾ?!

ಟೀಂ ಇಂಡಿಯಾ ಕ್ರಿಕೆಟಿಗನಿಗೆ ಇದೆಲ್ಲಾ ಬೇಕಿತ್ತಾ?!
ಮುಂಬೈ , ಗುರುವಾರ, 8 ಮಾರ್ಚ್ 2018 (09:11 IST)
ಮುಂಬೈ: ಇದು ಎಷ್ಟು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಆದರೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಪತ್ನಿಗೆ ಕಿರುಕುಳ ನೀಡಿದ್ದರೆಂಬ ಸುದ್ದಿ ಹಬ್ಬಿದೆ. ಇದಕ್ಕಾಗಿ ಅವರೀಗ ದುಬಾರಿ ಬೆಲೆ ತೆತ್ತಿದ್ದಾರೆ.

ಬಿಸಿಸಿಐ ಹೊಸದಾಗಿ ಆಟಗಾರರಿಗೆ ವೇತನ ಗುತ್ತಿಗೆ ಘೋಷಿಸಿದ್ದು ಇದರಿಂದ ಶಮಿ ಹೊರಬಿದ್ದಿದ್ದಾರೆ. ಟೀಂ ಇಂಡಿಯಾ ಪ್ರಮುಖ ಆಟಗಾರನಾಗಿಯೂ ಶಮಿಯನ್ನು ಗುತ್ತಿಗೆ ಪಟ್ಟಿಯಿಂದ ಹೊರ ಹಾಕಲಾಗಿದೆ. ಇದರಿಂದ ಶಮಿಗೆ ಭಾರೀ ನಷ್ಟವಾಗಲಿದೆ.

‘ಇದು ಶಮಿಯ ವೈಯಕ್ತಿಕ ವಿಚಾರವಾಗಿದ್ದರೂ, ಆತನ ವಿರುದ್ಧ ಕಿರುಕುಳಕ್ಕೊಳಗಾದ ಮಹಿಳೆ ಕೋಲ್ಕೊತ್ತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೀಗಾಗಿ ಈ ವಿಷಯ ಇತ್ಯರ್ಥವಾಗದೇ ಶಮಿಗೆ ಗುತ್ತಿಗೆ ನೀಡದೇ ಇರಲು ಬಿಸಿಸಿಐ ತೀರ್ಮಾನಿಸಿದೆ’ ಎಂದು ಬಿಸಿಸಿಐ ಮೂಲಗಳು ಮಾಧ್ಯಮವೊಂದಕ್ಕೆ ಹೇಳಿದೆ.

ವಾರ್ಷಿಕ ಗುತ್ತಿಗೆ ಪಡೆದ ಆಟಗಾರರು ತಮ್ಮ ಶ್ರೇಣಿ ಆಧಾರದಲ್ಲಿ ಭಾರೀ ಮೊತ್ತವನ್ನು ಸಂಭಾವನೆ ಪಡೆಯಲಿದ್ದಾರೆ. ಆದರೆ ಪತ್ನಿಗೆ ಕಿರುಕಳ ನೀಡಿದ ಆರೋಪ ಹೊತ್ತಿರುವ ಶಮಿ ಜೇಬಿಗೆ ಕತ್ತರಿ ಬೀಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೋವಿನಲ್ಲೂ ಆಡಿ ದಾಖಲೆಯ ಮೊತ್ತ ಮಾಡಿದ ಆರ್ ಸಿಬಿ ಮಾಜಿ ಕ್ರಿಕೆಟಿಗ!