Publish Date: Wed, 07 Mar 2018 (09:20 IST)
Updated Date: Wed, 07 Mar 2018 (09:21 IST)
ಕೊಲೊಂಬೊ: ಶ್ರೀಲಂಕಾದಲ್ಲಿ ತ್ರಿಕೋನ ಏಕದಿನ ಸರಣಿ ಆಡಲು ತೆರಳಿರುವ ಭಾರತ ತಂಡಕ್ಕೆ ಹಿಂದೆಂದೂ ಕಾಣದ ಬಿಗಿ ಭದ್ರತೆ ಒದಗಿಸಲಾಗಿದೆ.
ಇದಕ್ಕೆ ಕಾರಣ ಶ್ರೀಲಂಕಾದಲ್ಲಿ ಕಂಡುಬಂದಿರುವ ಹಿಂಸಾಚಾರ. ಹಿಂಸಾಚಾರ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಮುಂದಿನ 10 ದಿನಗಳ ಕಾಲ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಹೀಗಾಗಿ ಲಂಕಾದಲ್ಲಿರುವ ಭಾರತ ತಂಡಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಗಿ ಭದ್ರತೆ ಒದಗಿಸಲಾಗಿದೆ. ಪಂದ್ಯ ನಡೆಯುವ ಸ್ಥಳದಲ್ಲೂ ಬಿಗಿ ಭದ್ರತೆ ಒದಗಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ