Publish Date: Wed, 07 Mar 2018 (09:13 IST)
Updated Date: Wed, 07 Mar 2018 (09:15 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವೆ ನಿನ್ನೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದುವರೆಗೆ ಮಾಡದ ದಾಖಲೆಯೊಂದನ್ನು ಮಾಡಿದರು.
ಇದುವರೆಗೆ ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಒಂದೂ ಪಂದ್ಯ ಸೋತಿರಲಿಲ್ಲ. ಆದರೆ ನಿನ್ನೆಯ ಪಂದ್ಯ ಸೋಲುವ ಮೂಲಕ ಮೊದಲ ಬಾರಿಗೆ ತಮ್ಮ ನಾಯಕತ್ವದಲ್ಲಿ ಸೋಲಿನ ಕಹಿ ಉಂಡರು.
ಶ್ರೀಲಂಕಾ ವಿರುದ್ಧ ಭಾರತದ ಗೆಲುವಿನ ಸರಪಳಿ ಕೊನೆಗೂ ಕಳಚಿ ಬಿದ್ದಿದೆ. ಕಳೆದ 7 ಪಂದ್ಯಗಳನ್ನು ಸತತವಾಗಿ ಗೆದ್ದಿದ್ದ ಟೀಂ ಇಂಡಿಯಾ ನಿನ್ನೆಯ ಸೋಲಿನೊಂದಿಗೆ ಗೆಲವಿನ ಸರಣಿ ಕಡಿದುಕೊಂಡಿದೆ.
ಭಾರತ ನೀಡಿದ 175 ರನ್ ಗಳ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ಈ ಮೂಲಕ ಭಾರತದ ವಿರುದ್ಧ ಗರಿಷ್ಠ ರನ್ ಯಶಸ್ವಿಯಾಗಿ ಬೆನ್ನತ್ತಿದ ದಾಖಲೆ ಮಾಡಿತು. ಶಿಖರ್ ಧವನ್ ಈ ಪಂದ್ಯದಲ್ಲಿ 90 ರನ್ ಗಳಿಸಿದ್ದರು. ಈ ಮೂಲಕ ಸೋತ ಪಂದ್ಯದಲ್ಲಿ ಭಾರತ ಪರ ಗರಿಷ್ಠ ರನ್ ಮಾಡಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರು. ಮೊದಲೆರಡು ಸ್ಥಾನ, ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಹೆಸರಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ