Publish Date: Thu, 08 Mar 2018 (09:09 IST)
Updated Date: Thu, 08 Mar 2018 (09:10 IST)
ಡುನೆಡಿನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ತೊಡೆ ನೋವಿನ ನಡುವೆಯೂ ದಾಖಲೆಯ 181 ರನ್ ಸಿಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಷ್ಟೇ ಅಲ್ಲ, ಅವರ ಈ ಸಾಹಸಮಯ ಇನಿಂಗ್ಸ್ ನಿಂದಾಗಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯ ಗೆದ್ದು ಸರಣಿ ಸಮಬಲ ಮಾಡಿಕೊಂಡಿದೆ.
ಆಡುವಾಗ ತೀವ್ರ ನೋವಿನಿಂದ ಬಳಲುತ್ತಿದ್ದರೂ ತಂಡದ ಮ್ಯಾನೇಜ್ ಮೆಂಟ್ ರಿಟೈರ್ಡ್ ಹರ್ಟ್ ಆಗಿ ಹೊರನಡೆಯಲು ಅವಕಾಶ ನೀಡಿದರೂ ಸೊಪ್ಪು ಹಾಕದ ಟೇಲರ್ ವೃತ್ತಿಜೀವನ ಶ್ರೇಷ್ಠ ಇನಿಂಗ್ಸ್ ಆಡಿದರು. ಕೊನೆಗೆ ಇನಿಂಗ್ಸ್ ಮುಗಿಸಿ ಬರುವಾಗ ಅಕ್ಷರಶಃ ನೋವಿನಿಂದ ಕಣ್ಣೀರೇ ಹಾಕುತ್ತಿದ್ದರು. ಅವರ ಈ ಸಾಹಸಕ್ಕೆ ಇಡೀ ಮೈದಾನವೇ ಎದ್ದು ನಿಂತು ಗೌರವ ಸೂಚಿಸಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ