Publish Date: Thu, 08 Mar 2018 (09:04 IST)
Updated Date: Thu, 08 Mar 2018 (09:06 IST)
ಮುಂಬೈ: ವಿರಾಟ್ ಕೊಹ್ಲಿ ಇದೀಗ ವಿಶ್ವಶ್ರೇಷ್ಠ ಬ್ಯಾಟ್ಸ್ ಮನ್ ಎನ್ನುವುದರಲ್ಲಿ ಸಂಶಯವಿಲ್ಲ. ಈ ಯಶಸ್ವೀ ಬ್ಯಾಟ್ಸ್ ಮನ್ ಇನ್ನಷ್ಟು ಯಶಸ್ಸು ಕಾಣಬೇಕಾದರೆ ಕೌಂಟಿ ಕ್ರಿಕೆಟ್ ನಲ್ಲಿ ಆಡಬೇಕು ಎಂದು ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷ ಭಾರತ ಇಂಗ್ಲೆಂಡ್ ಗೆ ಟೆಸ್ಟ್ ಸರಣಿ ಆಡಲು ಪ್ರವಾಸ ಬೆಳೆಸಲಿದೆ. ಈ ಸಂದರ್ಭದಲ್ಲಿ ಅಲ್ಲಿನ ಪಿಚ್ ಗಳಿಗೆ ಹೊಂದಿಕೊಳ್ಳಲು ಅಲ್ಲಿಯೂ ಯಶಸ್ವಿಯಾಗಲು ಕೊಹ್ಲಿ ಅಲ್ಲಿ ನಡೆಯು ಕೌಂಟಿ ಕ್ರಿಕೆಟ್ ನಲ್ಲಿ ಆಡುವುದು ಒಳ್ಳೆಯದು ಎಂದು ಕಪಿಲ್ ಹೇಳಿದ್ದಾರೆ.
‘ಎಲ್ಲರೂ ಕೊಹ್ಲಿ ಗ್ರೇಟ್ ನೆಸ್ ಬಗ್ಗೆ ಮಾತಾಡುವಾಗ ಇಂಗ್ಲೆಂಡ್ ಪಿಚ್ ಗಳಲ್ಲಿ ಅವರು ಆಡಿ ಸೈ ಎನಿಸಬೇಕು ಎನ್ನುತ್ತಾರೆ. ಪ್ರಾಕ್ಟೀಸ್ ನಿಂದಲೇ ಮನುಷ್ಯ ಪರ್ಫೆಕ್ಟ್ ಆಗಲು ಸಾಧ್ಯ. ಹೀಗಾಗಿ ಕೊಹ್ಲಿ ಕೌಂಟಿ ಕ್ಲಬ್ ಗಳ ಪರ ಇಂಗ್ಲೆಂಡ್ ನಲ್ಲಿ ಸ್ವಲ್ಪ ಪಂದ್ಯ ಆಡಿದರೆ ಉತ್ತಮ ಅಭ್ಯಾಸ ಸಿಕ್ಕಂತಾಗುತ್ತದೆ’ ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ