Publish Date: Mon, 05 Mar 2018 (08:15 IST)
Updated Date: Mon, 05 Mar 2018 (08:17 IST)
ಮುಂಬೈ: ಮದುವೆಯಾದ ಬಳಿಕ ಬ್ಯುಸಿ ಕ್ರಿಕೆಟ್ ವೇಳಾಪಟ್ಟಿಯಿಂದಾಗಿ ಪತ್ನಿ ಅನುಷ್ಕಾ ಶರ್ಮಾ ಜತೆಗೆ ಕಾಲ ಕಳೆಯಲು ಅವಕಾಶವೇ ಸಿಗದಿದ್ದ ಬೇಸರದಲ್ಲಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಮಡದಿಯ ತೋಳ್ತೆಕ್ಕೆಗೆ ಸೇರಿದ್ದಾರೆ.
ದ.ಆಫ್ರಿಕಾ ಪ್ರವಾಸ ಮುಗಿಸಿ ಬಂದ ವಿರಾಟ್ ಗೆ ಅನುಷ್ಕಾ ಜತೆ ಇರಲಾಗಿರಲಿಲ್ಲ. ಅನುಷ್ಕಾ ಕೂಡಾ ತಮ್ಮ ಪರಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು.
ಇದೀಗ ಇಬ್ಬರೂ ಒಂದಾಗಿದ್ದು, ಸ್ವತಃ ವಿರಾಟ್ ಏರ್ ಪೋರ್ಟ್ ಗೆ ಹೋಗಿ ಪತ್ನಿಯನ್ನು ಕರೆದುಕೊಂಡು ಬಂದಿದ್ದಾರೆ. ಕಾರಿನೊಳಗೆ ಕೂತು ಅನುಷ್ಕಾ ಬರುವುದನ್ನೇ ಕಾದ ವಿರಾಟ್ ಆಕೆ ಪಕ್ಕದಲ್ಲಿ ಬಂದು ಕೂತ ತಕ್ಷಣ ಮಾಧ್ಯಮಗಳ ಕ್ಯಾಮರಾ ಕಣ್ಣು ತಮ್ಮನ್ನೇ ನೋಡುತ್ತಿದೆ ಎನ್ನುವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಅಪ್ಪಿ ಮುದ್ದಾಡಿದ್ದಾರೆ. ಇವರು ಕಾರೊಳಗೆ ರೊಮ್ಯಾನ್ಸ್ ಮಾಡುವುದನ್ನು ಮಾಧ್ಯಮಗಳು ಸೆರೆ ಹಿಡಿದಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ