Select Your Language

Notifications

webdunia
webdunia
webdunia
webdunia

ಬಚ್ಚನ್ ಮನೆಯಲ್ಲಿ ಹೋಳಿ ಸಂಭ್ರಮ

ಬಚ್ಚನ್ ಮನೆಯಲ್ಲಿ ಹೋಳಿ ಸಂಭ್ರಮ

ಅತಿಥಾ

ಬೆಂಗಳೂರು , ಶನಿವಾರ, 3 ಮಾರ್ಚ್ 2018 (16:13 IST)
ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿ ಹೋಳಿ ಆಚರಣೆ ಅದ್ಧೂರಿಯಾಗಿ ನಡೆದಿದೆ. ಬಿಗ್ ಬಿ ಅಮಿತಾಬ್, ಐಶ್ವರ್ಯ ರೈ ಬಚ್ಚನ್, ಮಗಳು ಆರಾಧ್ಯ ಬಚ್ಚನ್, ಜಯಾ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಸೇರಿ ಹೋಳಿ ಹಬ್ಬವನ್ನ ಆಚರಿಸಿದ್ದಾರೆ.
ಕಾಮದಹನದ ಫೋಟೋಗಳನ್ನು ಅಮಿತಾಭ್ ತಮ್ಮ ಟ್ವಿಟರ್‍‍‍‍‍‍‍‍‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಮಿತಾಭ್ ಪೋಸ್ಟ್ ಮಾಡಿದ ಚಿತ್ರಗಳಲ್ಲಿ ಅಭಿಷೇಕ್ ಬಚ್ಚನ್ ಕಾಣಿಸಿಕೊಂಡಿಲ್ಲ ಕಾರಣ ಅಭಿಷೇಕ್ ತಮ್ಮ ಮುಂದಿನ ಚಿತ್ರ ‘ಮನ್ ಮರ್ಜಿಯಾ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 
 
ಪೂಜೆ ಬಳಿಕ ಅಮಿತಾಭ್ ಮೊಮ್ಮಗಳು ಆರಾಧ್ಯ, ಸೊಸೆ ಐಶ್ವರ್ಯಾ ಹಾಗೂ ಮಗಳು ಶ್ವೇತಾಗೆ ತಿಲಕ ಇಟ್ಟು ಆಶೀರ್ವಾದ ಮಾಡಿದ್ದಾರೆ. ಪೂಜೆ ಬಳಿಕ ಎಲ್ಲರೂ ಕಜ್ಜಾಯ ಸವಿದಿದ್ದಾರೆ.
 
ಶ್ರೀದೇವಿ ಹಠಾತ್ ನಿರ್ಗಮದ ಕಾರಣ ಕೆಲವು ತಾರೆಗಳು ಈ ಸಲ ಹೋಳಿ ಹಬ್ಬ ಆಚರಿಸಿಕೊಂಡಿಲ್ಲ, ಇನ್ನೂ ಕೆಲವರು ಸರಳವಾಗಿ ಹೋಳಿ ಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಚರ್ಚೆಗೆ ಗ್ರಾಸವಾಯಿತು ಒಳ್ಳೆ ಹುಡುಗ ಪ್ರಥಮ್ ಗೆ ಧರ್ಮಾದಿಕಾರಿ ವೀರೇಂದ್ರ ಹೆಗ್ಡೆ ಕೊಟ್ಟ ವಾಚ್!