Publish Date: Sat, 03 Mar 2018 (07:29 IST)
Updated Date: Sat, 03 Mar 2018 (07:35 IST)
ಮುಂಬೈ: ನಟಿ ಶ್ರೀದೇವಿ ಮೃತಪಟ್ಟ ಹಿನ್ನೆಲೆ, ಬಾಲಿವುಡ್‍ನಲ್ಲಿ ಇನ್ನೂ ದುಃಖ ಮಡುಗಟ್ಟಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವಾರು ತಾರೆಗಳು ಈ ಸಲ ಹೋಳಿ ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದಿದ್ದರು. ಈ ಸಲ ಕೆಲವು ತಾರೆಗಳು ಸರಳವಾಗಿ ಹೋಳಿ ಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ.
ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಮಗಳು ಶ್ವೇತಾ ನಂದಾ ಬಚ್ಚನ್, ಸೊಸೆ ಐಶ್ವರ್ಯಾ ರೈ ಹಾಗೂ ಮೊಮ್ಮಗಳು ಆರಾಧ್ಯಾ ಬಚ್ಚನ್ ಭಾಗಿಯಾಗಿದ್ದರು. ಆದರೆ ಅಭಿಷೇಕ್ ಬಚ್ಚನ್ ಚಿತ್ರೀಕರಣದಲ್ಲಿ ಇರುವ ಕಾರಣಗಳಿಂದ ಹೋಳಿ ಹಬ್ಬದಲ್ಲಿ ಭಾಗಿಯಾಗಲಿಲ್ಲ.
ಅಮಿತಾಬ್ ಬಚ್ಚನ್ ಗೆ ಜಯಾ ಬಚ್ಚನ್ ಅವರು ತಿಲಕ ಇಡುತ್ತಿರುವ, ಬಿಗ್ ಬಿ ಆರಾಧ್ಯರನ್ನು ಆಶೀರ್ವದಿಸುತ್ತಿರುವ ಫೋಟೋಗಳನ್ನು ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ ಅಮಿತಾಬ್. ಈ ಬಾರಿಯ ಹೋಳಿಯನ್ನು ತುಂಬಾ ಸರಳವಾಗಿ ಆಚರಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ