Select Your Language

Notifications

webdunia
webdunia
webdunia
webdunia

ಕುತೂಹಲ ಮೂಡಿಸಿದ ಅಮಿತಾಬ್ ಬಚ್ಚನ್ ರಾಜಕೀಯ ನಡೆ

ಅಮಿತಾಬ್ ಬಚ್ಚನ್
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ನಡವಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದು, ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಊಹಾಪೋಹ ಹಬ್ಬಿದೆ.

ಟ್ವಿಟ್ಟರ್‌ನಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಧುರೀಣರನ್ನು ಫಾಲೋ ಮಾಡುತ್ತಿರುವ ಅಮಿತಾಬ್ ಬಚ್ಚನ್, ಕಾಂಗ್ರೆಸ್ ನಾಯಕರಿಗೆ ಟ್ವಿಟ್ ಕೂಡ ಮಾಡುತ್ತಿದ್ದು, ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಹುಬ್ಬೇರುವಂತೆ ಮಾಡಿದೆ.
 
ಅಮಿತಾಬ್ ಬಚ್ಚನ್ ಅವರು ನೆಹರು-ಗಾಂಧಿ ಕುಟುಂಬದ ಪರಮಾಪ್ತರು. ಅಲ್ಲದೇ ರಾಜೀವ್ ಗಾಂಧಿಗೆ ಆಪ್ತಮಿತ್ರರಾಗಿದ್ದರು. ಆದರೆ, ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಅವರಿಗೆ ಕಾಂಗ್ರೆಸ್ ಬಗ್ಗೆ ದಿಢೀರ್ ಪ್ರೇಮ ಬರಲು ಕಾರಣವೇನು ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತಿರುವನಂತಪುರಂ ಮೃಗಾಲಯದಲ್ಲಿನ ಸಿಂಹದ ಪಂಜರಕ್ಕೆ ಹಾರಿದ ಭೂಪ