Publish Date: Wed, 21 Feb 2018 (09:06 IST)
Updated Date: Wed, 21 Feb 2018 (09:07 IST)
ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಪ್ರಕರಣ ಸದನದಲ್ಲೂ ಪ್ರತಿಧ್ವನಿಸಿದೆ. ಈ ಕುರಿತು ವಿಪಕ್ಷ ಸದಸ್ಯರು ಗದ್ದಲವೆಬ್ಬಿಸುತ್ತಿದ್ದಂತೆ ಶಾಸಕ ಹ್ಯಾರಿಸ್ ಭಾವುಕರಾಗಿ ಕ್ಷಮೆ ಯಾಚಿಸಿದ್ದಾರೆ.
ನನ್ನ ಮಗ ತಪ್ಪು ಮಾಡಿದ್ದಾನೆ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ಕೈ ಮುಗಿದು ಸದನದಲ್ಲಿ ಕ್ಷಮೆ ಯಾಚಿಸಿದ ಹ್ಯಾರಿಸ್, ನಾನು ಈ ಮನೆಯ (ಸದನ) ಸದಸ್ಯ. ಹಾಗೇ ಒಬ್ಬ ತಂದೆ ಕೂಡಾ. ತಪ್ಪು ಮಾಡಿರುವ ಮಗನನ್ನು ಶರಾಣಗತಿ ಮಾಡಿಸಿದ್ದೇನೆ.
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ನನ್ನ ಮಗನನ್ನು ತಿದ್ದಿ ಸರಿದಾರಿಗೆ ತರುತ್ತೇನೆ. ದಯವಿಟ್ಟು ಕ್ಷಮಿಸಿ. ನೋವಿನ ಮೇಲೆ ಮತ್ತೆ ಬರೆ ಎಳೆಯಬೇಡಿ ಎಂದು ಕೈ ಮುಗಿದು ಕೇಳುವಾಗ ಕೊಂಚ ಭಾವುಕರಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ