Select Your Language

Notifications

webdunia
webdunia
webdunia
webdunia

ಉಳ್ಳವರ ಮಕ್ಕಳ ದೌರ್ಜನ್ಯಕ್ಕೆ ಕಡಿವಾಣ ಅಗತ್ಯ– ಬಸವರಾಜ ಹೊರಟ್ಟಿ

ಉಳ್ಳವರ ಮಕ್ಕಳ ದೌರ್ಜನ್ಯಕ್ಕೆ ಕಡಿವಾಣ ಅಗತ್ಯ– ಬಸವರಾಜ ಹೊರಟ್ಟಿ
ಬೆಂಗಳೂರು , ಮಂಗಳವಾರ, 20 ಫೆಬ್ರವರಿ 2018 (15:51 IST)
ರಾಜ್ಯದಲ್ಲಿ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿ ಹೋಗಿದೆ. ಪ್ರಕರಣದಲ್ಲಿ ರಾಜಕಾರಣ ಮಾಡದೇ ಸೂಕ್ತ ಕ್ರಮ ಜರುಗಿಸಿ, ಉಳ್ಳವರ ಮಕ್ಕಳ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕಿದೆ ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
 
ಕಲಾಪ ಆರಂಭವಾದಾಗ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಿ ಮಾತನಾಡಿದ ನಂತರ ಮಾತನಾಡಿ, ಮಾರಣಾಂತಿಕ ಹಲ್ಲೆ ಮಾಡಿದವನ ಬಂಧಿಸುವ ಸಂದರ್ಭದಲ್ಲಿ ಜೈಕಾರ ಹಾಕಲಾಗಿದೆ. ಮಾಧ್ಯಮದವರ ಮೇಲೂ ಹಲ್ಲೆ ಮಾಡಲಾಗಿದೆ. ಇಂತಹ ಅನಿಷ್ಠ ಪದ್ಧತಿಗಳು ತೊಲಗಬೇಕು ಎಂದು ತಿಳಿಸಿದ್ದಾರೆ.
 
ಸ್ಕೈಬಾರ್ ಹೋಟೆಲ್‍ನ ಫಾರ್ಜಿ ಕೆಫೆಯಲ್ಲಿ ಇಂತಹ ಪ್ರಕರಣಗಳು ಪದೇ ಪದೇ ಸಂಭವಿಸುತ್ತಿವೆ. ಈ ಹೋಟೆಲ್‌ಗೆ ರಾಜಕಾರಣಿಗಳು ಮಕ‌್ಕಳು ಹೆಚ್ಚಾಗಿ ಹೋಗುತ್ತಾರೆ. ಆದ್ದರಿಂದ ಹೋಟೆಲ್ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗುಂಡಾಗಿರಿ ಪ್ರಕರಣದ ಆರೋಪಿಗಳ ಗಡಿಪಾರಿಗೆ ಈಶ್ವರಪ್ಪ ಒತ್ತಾಯ