Publish Date: Tue, 20 Feb 2018 (09:26 IST)
Updated Date: Tue, 20 Feb 2018 (09:29 IST)
ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಎಂಬಾತನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ರನ್ನು ಇದೀಗ ಪೊಲೀಸರು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.
ಮಧ್ಯರಾತ್ರಿವರೆಗೆ ನಲಪಾಡ್ ಮತ್ತು ಗ್ಯಾಂಗ್ ನಿದ್ರೆ ಮಾಡಿರಲಿಲ್ಲವೆನ್ನಲಾಗಿದೆ. ಆಗಾಗ ಪೊಲೀಸರು ನಡೆಸುವ ವಿಚಾರಣೆಗೂ ಸರಿಯಾದ ಉತ್ತರ ನೀಡಲಿಲ್ಲವೆನ್ನಲಾಗಿದೆ. ಆ ಮೂಲಕ ಘಟನೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಸಾಧಿಸಲು ಯತ್ನಿಸುತ್ತಿದ್ದಂತಿತ್ತು.
ಇಂದೂ ಕೂಡಾ ಪೊಲೀಸ್ ವಿಚಾರಣೆ ಮುಂದುವರಿಯಲಿದ್ದು, ಘಟನೆ ನಡೆದ ಸ್ಥಳಕ್ಕೆ ಕರೆದಯ್ದು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಅತ್ತ ಹಲ್ಲೆಗೊಳಗಾದ ವಿದ್ವತ್ ಗೆ ಇನ್ನೂ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ