Select Your Language

Notifications

webdunia
webdunia
webdunia
webdunia

ಯುಪಿ ಮುಖ್ಯಮಂತ್ರಿ ಯೋಗಿಯ ಸ್ವಾಗತಕ್ಕೆ ಕೇಸರಿಮಯವಾದ ಮಥುರಾ

ಯುಪಿ ಮುಖ್ಯಮಂತ್ರಿ ಯೋಗಿಯ ಸ್ವಾಗತಕ್ಕೆ ಕೇಸರಿಮಯವಾದ ಮಥುರಾ

ರಾಮಕೃಷ್ಣ ಪುರಾಣಿಕ

ಮಥುರಾ , ಶುಕ್ರವಾರ, 23 ಫೆಬ್ರವರಿ 2018 (19:14 IST)
ಲಾಥ್ಮರ್ ಹೋಳಿ ಉತ್ಸವದಲ್ಲಿ ಭಾಗವಹಿಸಲು ಇಲ್ಲಿನ ಬರ್ಸಾನಾಕ್ಕೆ ಭೇಟಿ ನೀಡಲಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಸ್ವಾಗತಿಸಲು ಮಥುರಾದ ಕಟ್ಟಡಗಳು ಮತ್ತು ಗೋಡೆಗಳಿಗೆ ಕೇಸರಿ ಬಣ್ಣವನ್ನು ಬಳಿಯಲಾಗುತ್ತಿದೆ.
ಮುಖ್ಯಮಂತ್ರಿ ಯೋಗಿ ಅವರನ್ನು ಸ್ವಾಗತಿಸಲು ಕಾರ್ಯಕರ್ತರ ಸಹಾಯದಿಂದ ನಗರ ಪಂಚಾಯತ್ ಸ್ವಚ್ಛತೆಯಿಂದ ಹಿಡಿದು ನಗರವನ್ನು ಕೇಸರಿಮಯ ಮಾಡಲು ನಿರಂತರವಾಗಿ ಕಾರ್ಯನಿರ್ವವಹಿಸುತ್ತಿದೆ.
 
“ತಯಾರಿಯು ಭರದಿಂದ ಸಾಗಿದೆ. ನಗರ ಪಂಚಾಯತ್ ಎಲ್ಲ ಸೌಲಭ್ಯಗಳು ಲಭ್ಯವಾಗುವಂತೆ ಮಾಡಿದೆ. ನಾವು ಹೋಳಿ ಹಬ್ಬದ ಉತ್ಸವಕ್ಕಾಗಿ ಸಂಪೂರ್ಣ ನಗರವನ್ನು ಸ್ವಚ್ಛ ಮಾಡುತ್ತಿದ್ದೇವೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 
“ಪ್ರತಿ ವರ್ಷವೂ ನಾವು ಬಣ್ಣಮಯವಾದ ಹೋಳಿಯನ್ನು ಆಚರಿಸುತ್ತಿದ್ದೇವೆ. ಈ ವರ್ಷ ಕೇಸರಿಮಯವಾಗಿರಲಿದೆ. ಮುಖ್ಯಮಂತ್ರಿಯವರು ನಮ್ಮೊಂದಿಗೆ ಹಬ್ಬವನ್ನು ಆಚರಿಸಲು ನಗರಕ್ಕೆ ಆಗಮಿಸುತ್ತಿರುವುದು ನಮಗೆ ಹೆಚ್ಚು ಸಂತೋಷವನ್ನು ಉಂಟು ಮಾಡಿದೆ” ಎಂದು ಸ್ಥಳೀಯರು ಹೇಳುತ್ತಿದ್ದಾರೆ.
 
ಯೋಗಿ ಆದಿತ್ಯನಾಥ ಅವರು ಹೋಳಿ ಹಬ್ಬವನ್ನು ಆಚರಿಸಸಲು ಫೆಬ್ರುವರಿ 24 ರಂದು ಬರ್ಸಾನಾಕ್ಕೆ ಭೇಟಿ ನೀಡಲಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ವತ್ ಹಲ್ಲೆ ಕೇಸ್: ಮೊಹಮ್ಮದ್ ನಲಪಾಡ್ ಗಿಲ್ಲ ಇಂದು ಬಿಡುಗಡೆ ಭಾಗ್ಯ