Publish Date: Fri, 02 Mar 2018 (10:29 IST)
Updated Date: Fri, 02 Mar 2018 (10:31 IST)
ಮುಂಬೈ: ದ.ಆಫ್ರಿಕಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಕೊನೆಯವರೆಗೂ ಪ್ಲಾಪ್ ಶೋ ನೀಡಿದ್ದರು. ಅವರ ಈ ತಪ್ಪಿಗೆ ವಿರಾಟ್ ಮತ್ತು ತಂಡದ ಮ್ಯಾನೇಜ್ ಮೆಂಟ್ ಹೊಸ ಹುದ್ದೆ ನೀಡಿದೆ.
ಪ್ರತೀ ಬಾರಿ ರೋಹಿತ್ ಬ್ಯಾಟಿಂಗ್ ಗೆ ಇಳಿದಾಗ ಆರಂಭದಲ್ಲಿ ನಾಲ್ಕೈದು ಬಾಲ್ ಗಳನ್ನು ಸ್ಟಡಿ ಮಾಡಿ ನಂತರದ ಎಸೆತಕ್ಕೆ ಔಟಾಗುತ್ತಿದ್ದರು. ಅಷ್ಟಕ್ಕೇ ಸುಮ್ಮನಾಗದೇ ಡ್ರೆಸ್ಸಿಂಗ್ ರೂಂಗೆ ಬಂದು ಪಿಚ್ ಹೇಗೆ ವರ್ತಿಸುತ್ತಿದೆ, ನೀವು ಯಾವ ರೀತಿ ಬ್ಯಾಟ್ ಮಾಡಬೇಕು ಎಂದು ಇತರ ಬ್ಯಾಟ್ಸ್ ಮನ್ ಗಳಿಗೆ ಪಾಠ ಮಾಡುತ್ತಿದ್ದರು!
ಇದನ್ನು ನೋಡಿ ವಿರಾಟ್, ರೋಹಿತ್ ಶರ್ಮಾಗೆ ಮುಂಬರುವ ವಿದೇಶೀ ಸರಣಿಗಳಲ್ಲಿ ಹೊಸ ಜವಾಬ್ದಾರಿ ನೀಡಿದ್ದಾರೆ. ಮುಂಬರುವ ವಿದೇಶಿ ಸರಣಿಗಳಲ್ಲಿ ರೋಹಿತ್ ಪಿಚ್ ಆಫೀಸರ್ ಆಗಲಿದ್ದಾರೆ! ಪಿಚ್ ಬಗ್ಗೆ ಅಧ್ಯಯನ ಮಾಡಿ ಇತರ ಆಟಗಾರರಿಗೆ ಅದರ ಬಗ್ಗೆ ಹೇಳುವುದು ಅವರ ಜವಾಬ್ದಾರಿ ಆಗಲಿದೆ. ಈ ಗಡಿಬಿಡಿಯಲ್ಲಿ ಬರೀ ಪಿಚ್ ಅಧ್ಯಯನ ಮಾಡುವುದು ಶೂನ್ಯಕ್ಕೆ ಔಟಾಗುವುದಷ್ಟೇ ಕೆಲಸವಾಗದಿದ್ದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ!
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ