Select Your Language

Notifications

webdunia
webdunia
webdunia
webdunia

ವಿವಾದಾತ್ಮಕ ಹೇಳಿಕೆ ಕೊಟ್ಟ ರವಿಶಾಸ್ತ್ರಿಗೆ ಅಭಿಮಾನಿಗಳ ತಪರಾಕಿ

ವಿವಾದಾತ್ಮಕ ಹೇಳಿಕೆ ಕೊಟ್ಟ ರವಿಶಾಸ್ತ್ರಿಗೆ ಅಭಿಮಾನಿಗಳ ತಪರಾಕಿ
ಮುಂಬೈ , ಗುರುವಾರ, 1 ಮಾರ್ಚ್ 2018 (08:32 IST)
ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತಮ್ಮ ಆಕ್ರಮಣಕಾರಿ ಹೇಳಿಕೆಗಳಿಂದಲೇ ಇತ್ತೀಚೆಗೆ ಸುದ್ದಿಯಾಗುತ್ತಿದ್ದಾರೆ. ಅವರ ಹೇಳಿಕೆಯೊಂದು ಇದೀಗ ಅಭಿಮಾನಿಗಳಲ್ಲಿ ಭಾರೀ ಅಸಮಾಧಾನ ಮೂಡಿಸಿದೆ.

ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋತಾಗ ಟೀಕೆ ಎದುರಿಸಿದ್ದನ್ನು ಸ್ಮರಿಸಿಕೊಂಡು ರವಿಶಾಸ್ತ್ರಿ, ಭಾರತದಲ್ಲಿರುವ ಜನ ನಮ್ಮ ಸೋಲನ್ನೇ ಬಯಸುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದಕ್ಕೆ ಇದೀಗ ಟ್ವಿಟಟಿಗರು ಟಾಂಗ್ ಕೊಟ್ಟಿದ್ದಾರೆ. ರವಿಶಾಸ್ತ್ರಿ ತಲೆಬುಡವಿಲ್ಲದ ನಿರ್ಧಾರ ತೆಗೆದುಕೊಳ್ಳುವಾಗ, ತಂಡದ ಆಯ್ಕೆ ವಿಚಾರದಲ್ಲಿ ಮೂಗು ತೂರಿಸಿ ಭುವಿ, ರೆಹಾನೆಯಂತಹ ಆಟಗಾರರನ್ನು ಕೈ ಬಿಡುವಾಗ ಮಾತ್ರ ಅವರನ್ನು ನಾವು ಧ್ವೇಷಿಸುತ್ತೇವೆ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ‘ಬಾಂಗ್ ಕುಡಿದು ಮಾತನಾಡುತ್ತಿದ್ದೀರಾ’ ಎಂದು ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೀರಿಲ್ಲದೇ ಬಣಗುಡುತ್ತಿರುವ ಕೇಪ್ ಟೌನ್ ನಗರಕ್ಕೆ ವಿರಾಟ್ ಕೊಹ್ಲಿ ಮತ್ತು ಬಳಗ ನೆರವಾಗಿದ್ದು ಹೇಗೆ ಗೊತ್ತಾ?!