Publish Date: Wed, 28 Feb 2018 (08:12 IST)
Updated Date: Wed, 28 Feb 2018 (08:14 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿನದಿಂದ ದಿನಕ್ಕೆ ಜೀನಿಯಸ್ ಬ್ಯಾಟ್ಸ್ ಮನ್ ಆಗುತ್ತಿದ್ದಾರೆ. ಅವರ ವಿಕೆಟ್ ಪಡೆಯುವುದು ಸದ್ಯಕ್ಕೆ ಎಲ್ಲಾ ಬೌಲರ್ ಗಳಿಗೆ ಸವಾಲು. ಪಾಕಿಸ್ತಾನದ ಈ ಬೌಲರ್ ನ ಕನಸೂ ಅದುವೇ.
ಪಾಕ್ ವೇಗಿ ರುಮನ್ ರಾಯಿಸ್ ತಮಗೆ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಕನಸು ಎಂದಿದ್ದಾರೆ. ಹಿಂದೆಲ್ಲಾ ಪಾಕ್ ಕ್ರಿಕೆಟಿಗರು ಸಚಿನ್ ತೆಂಡುಲ್ಕರ್ ವಿಕೆಟ್ ಕಬಳಿಸಲು ಹೊಂಚು ಹಾಕುತ್ತಿದ್ದರು. ಇದೀಗ ಅವರ ಗಮನ ವಿರಾಟ್ ಕೊಹ್ಲಿ ಮೇಲೆ ಇದೆ.
ಒಂದು ವೇಳೆ ತಮ್ಮ ವೃತ್ತಿ ಜೀವನದಲ್ಲಿ ವಿರಾಟ್ ವಿಕೆಟ್ ಪಡೆಯಲು ಯಶಸ್ವಿಯಾದರೆ ಅದುವೇ ದೊಡ್ಡ ಸಾಧನೆಯಾಗಲಿದೆ ಎಂದು ರಾಯಿಸ್ ಹೇಳಿಕೊಂಡಿದ್ದಾರೆ. ಕೊನೆಯ ಬಾರಿಗೆ ಪಾಕ್ ವಿರುದ್ಧ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿತ್ತು. ಆದರೆ ಕೊಹ್ಲಿ ಬೇಗನೇ ಔಟಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ