Select Your Language

Notifications

webdunia
webdunia
webdunia
webdunia

ದಕ್ಷಿಣ ಆಫ್ರಿಕಾದಲ್ಲಿ ಅಬ್ಬರಿಸಿದ ಕೊಹ್ಲಿ ಪಡೆ; ವಿರಾಟ್ ಗೆ ದಕ್ಕಿತು ಮತ್ತೊಂದು ಶತಕ

ದಕ್ಷಿಣ ಆಫ್ರಿಕಾದಲ್ಲಿ ಅಬ್ಬರಿಸಿದ ಕೊಹ್ಲಿ ಪಡೆ; ವಿರಾಟ್ ಗೆ ದಕ್ಕಿತು ಮತ್ತೊಂದು ಶತಕ
ಸೆಂಚೂರಿಯನ್ , ಶನಿವಾರ, 17 ಫೆಬ್ರವರಿ 2018 (06:24 IST)
ಸೆಂಚೂರಿಯನ್: ಸೂಪರ್ ಸ್ಪೋರ್ಟ್ ಪಾರ್ಕ್  ಮೈದಾನದಲ್ಲಿ ನಡೆದ ಏಕದಿನ ಮಾದರಿಯಲ್ಲಿ ವಿರಾಟ್‌ ಗಳಿಸಿದ 35ನೇ ಶತಕದ ನೆರವಿನಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ಎದುರಿನ ಆರನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಜಯಭೇರಿ ಮೊಳಗಿಸಿತು. ಇದರೊಂದಿಗೆ ಹರಿಣಗಳ ನಾಡಿನಲ್ಲಿ 5–1ರಿಂದ ಸರಣಿ ಗೆದ್ದು ಚಾರಿತ್ರಿಕ ಸಾಧನೆಗೆ ಭಾಜನವಾಯಿತು.


ಈ ಮೂಲಕ ಹರಿಣಗಳ ತಂಡವು ಭಾರಿ ಮುಖಭಂಗಕ್ಕೊಳಗಾಗಿದೆ. ಗೆಲುವಿಗಾಗಿ 205 ರನ್ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಕ್ಕೆ ನಾಯಕ ವಿರಾಟ್ ಕೊಹ್ಲಿ ಮಗದೊಂದು ಬಿರುಸಿನ ಶತಕ (129*) ಬಾರಿಸುವ ಮೂಲಕ ವಿಜಯದ ಹಾದಿಯನ್ನು ಸುಲಭಗೊಳಿಸಿದರು. ಇದರೊಂದಿಗೆ 32.1 ಓವರ್‌ಗಳಲ್ಲೇ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಹಾಗೆಯೇ ದಕ್ಷಿಣ ಆಫ್ರಿಕಾ ನೆಲದಲ್ಲಿ ವಿರಾಟ್ ಕೊಹ್ಲಿ ಪಡೆ ಹೊಸ ಇತಿಹಾಸವನ್ನು ಸೃಷ್ಟಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಆಕ್ರಮಣಕಾರಿ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಲಿ - ಜಾಕ್ ಕಾಲಿಸ್