Select Your Language

Notifications

webdunia
webdunia
webdunia
webdunia

ಫ್ಲಾಪ್ ಶೋ ಕೊಟ್ಟ ಜಸ್ಪ್ರೀತ್ ಬುಮ್ರಾಗೆ ಶಾಕ್

ಫ್ಲಾಪ್ ಶೋ ಕೊಟ್ಟ ಜಸ್ಪ್ರೀತ್ ಬುಮ್ರಾಗೆ ಶಾಕ್
ದುಬೈ , ಗುರುವಾರ, 13 ಫೆಬ್ರವರಿ 2020 (09:21 IST)
ದುಬೈ: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಫ್ಲಾಪ್ ಶೋ ಕೊಟ್ಟ ವೇಗಿ ಜಸ್ಪ್ರೀತ್ ಬುಮ್ರಾಗೆ ಇದೀಗ ಶಾಕ್ ಸಿಕ್ಕಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಬುಮ್ರಾಗೆ ಹಿನ್ನಡೆಯಾಗಿದೆ.


ನಂ.1 ಸ್ಥಾನದಲ್ಲಿದ್ದ ಬುಮ್ರಾ ಪಟ್ಟ ಕಳೆದುಕೊಂಡಿದ್ದು, 45 ಅಂಕ ಕಳೆದುಕೊಂಡು 2 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಬುಮ್ರಾ ವಿಕೆಟ್ ಕೀಳಲು ವಿಫಲರಾಗಿದ್ದರು.

ಹೀಗಾಗಿ ಅವರ ಸ್ಥಾನಕ್ಕೆ ಕುತ್ತು ಬಂದಿದೆ. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರನ್ ಗಳಿಸಲು ವಿಫಲರಾದ ಹೊರತಾಗಿಯೂ 869 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್-ನೀಶಾಮ್ ಜಗಳಕ್ಕೆ ಹಾಸ್ಯದ ಲೇಪ ಕೊಟ್ಟ ಐಸಿಸಿ