Publish Date: Wed, 12 Feb 2020 (09:24 IST)
Updated Date: Wed, 12 Feb 2020 (09:26 IST)
ಬೇ ಓವಲ್: ನ್ಯೂಜಿಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯದ ವೇಳೆ ಕಿವೀಸ್ ವೇಗಿ ನೀಶಾಮ್ ಮತ್ತು ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ನಡುವೆ ನಡೆದ ವಾಗ್ವಾದಕ್ಕೆ ಐಸಿಸಿ ಈಗ ಹಾಸ್ಯದ ಲೇಪ ಕೊಟ್ಟಿದೆ.
ರನ್ ಕದಿಯುವಾಗ ಅಡ್ಡ ಬಂದರು ಎಂಬ ಕಾರಣಕ್ಕೆ ನೀಶಾಮ್ ವಿರುದ್ಧ ಮೈದಾನದಲ್ಲಿ ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಅಂಪಾಯರ್ ಮಧ‍್ಯಪ್ರವೇಶಿಸಿದ್ದರು. ಈ ಸಂದರ್ಭದ ಫೋಟೋವನ್ನು ತನ್ನ ಟ್ವಿಟರ್ ನಲ್ಲಿ ಪ್ರಕಟಿಸಿದ ಐಸಿಸಿ ಸೂಪರ್ ಓವರ್ ಬದಲು ನಮಗೆ ಇಂತಹ ಆಟಗಳು ಬೇಕಲ್ಲವೇ ಎಂದು ಹಾಸ್ಯ ಮಾಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ನೀಶಾಮ್ ಮಕ್ಕಳು ಆಡುವ ಸ್ಟೋನ್ ಪೇಪರ್ ಸೀಸರ್ ಆಟಕ್ಕೆ ತಮ್ಮಿಬ್ಬರ ವಾಗ್ವಾದದ ಫೋಟೋವನ್ನು ಹೋಲಿಸಿ ಹೋಲಿಸಿ ಹಾಸ್ಯ ಮಾಡಿದ್ದಾರೆ.