Publish Date: Tue, 11 Feb 2020 (11:44 IST)
Updated Date: Tue, 11 Feb 2020 (11:46 IST)
ಬೇ ಓವಲ್: ಮೈದಾನದಲ್ಲಿ ಎಂದಿಗೂ ತಾಳ್ಮೆ ಕಳೆದುಕೊಳ್ಳದ ಕೆಎಲ್ ರಾಹುಲ್ ಇಂದು ನ್ಯೂಜಿಲೆಂಡ್ ವಿರುದ್ಧದ ತೃತೀಯ ಏಕದಿನ ಪಂದ್ಯದಲ್ಲಿ ವಾಗ್ವಾದಕ್ಕಿಳಿದ ಘಟನೆ ನಡೆದಿದೆ.
ಶತಕದ ಇನಿಂಗ್ಸ್ ಆಡಿದ ರಾಹುಲ್ ರನ್ ಕದಿಯುತ್ತಿದ್ದಾಗ ಎದುರಾಳಿ ಬೌಲರ್ ಜೇಮ್ಸ್ ನೀಶಾಮ್ ಹಾದಿಗೆ ಅಡ್ಡ ಬಂದರು. ಇದರಿಂದ ತಾಳ್ಮೆ ಕಳೆದುಕೊಂಡ ರಾಹುಲ್ ರನ್ ಪೂರ್ತಿಗೊಳಿಸಿದ ಬಳಿಕ ನೀಶಾಮ್ ಬಳಿ ತೆರಳಿ ಇದನ್ನು ಪ್ರಶ್ನಿಸಿದರು.
ಆದರೆ ಇನ್ನೇನು ಇಬ್ಬರ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯುತ್ತದೆ ಎನ್ನುವಷ್ಟರಲ್ಲಿ ಸ್ವತಃ ರಾಹುಲ್ ತಾಳ್ಮೆ ತಂದುಕೊಂಡು ನಗುತ್ತಲೇ ಸ್ವಸ್ಥಾನಕ್ಕೆ ಮರಳಿದರು.