Publish Date: Mon, 10 Feb 2020 (09:22 IST)
Updated Date: Mon, 10 Feb 2020 (09:23 IST)
ಆಕ್ಲೆಂಡ್: ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಿನ್ನೆ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಿ ತಂಡಕ್ಕೆ ಚಿಯರ್ ಅಪ್ ಮಾಡಿದೆ.
ಅಂಡರ್ 19 ವಿಶ್ವಕಪ್ ಫೈನಲ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ್ದ ಭಾರತ ತಂಡದ ಆಟವನ್ನು ನೋಡಲು ಸೀನಿಯರ್ಸ್ ತಮ್ಮ ಅಭ್ಯಾಸವನ್ನು ಬಿಟ್ಟು ಹೋಟೆಲ್ ರೂಂನಲ್ಲೇ ಠಿಕಾಣಿ ಹೂಡಿದ್ದರು.
ಕೋಚ್ ರವಿಶಾಸ್ತ್ರಿ, ರವೀಂದ್ರ ಜಡೇಜಾ ಸೇರಿದಂತೆ ಟೀಂ ಇಂಡಿಯಾದ ಬಹುತೇಕ ಕ್ರಿಕೆಟಿಗರು ಪಂದ್ಯದ ನೇರಪ್ರಸಾರವನ್ನು ಟಿವಿಯಲ್ಲಿ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ.